ADVERTISEMENT

ವಿಶ್ವಕಪ್ ಗೆಲ್ಲಿಸಿದ ಧೋನಿ, ಉಳಿದವರು ಲಸ್ಸಿ ಕುಡಿಯಲು ಹೋಗಿದ್ರಾ? - ಹರಭಜನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2022, 11:27 IST
Last Updated 13 ಏಪ್ರಿಲ್ 2022, 11:27 IST
ಹರಭಜನ್ ಸಿಂಗ್ (ಸಂಗ್ರಹ ಚಿತ್ರ)
ಹರಭಜನ್ ಸಿಂಗ್ (ಸಂಗ್ರಹ ಚಿತ್ರ)   

ಮುಂಬೈ: 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಂದಾಗಿ ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು ಎಂಬ ವಾದವನ್ನು ಮಾಜಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ತಳ್ಳಿ ಹಾಕಿದ್ದಾರೆ.

ಐಪಿಎಲ್‌ನಲ್ಲಿ ಪಂದ್ಯದ ಮುನ್ನ ನಡೆದ ಕಾರ್ಯಕ್ರಮದಲ್ಲಿ 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿರುವ ಹರಭಜನ್ ಈ ಕುರಿತು ಕಿಡಿ ಕಾರಿದ್ದಾರೆ. ಅಲ್ಲದೆ ವಿಶ್ವಕಪ್ ಗೆಲ್ಲಲು ಧೋನಿ ಒಬ್ಬರೇ ಕಾರಣ ಎಂದು ಬಿಂಬಿಸುವುದನ್ನು ವಿರೋಧಿಸಿದ್ದಾರೆ.

'ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಾಗ, ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿತು ಎಂಬ ಶೀರ್ಷಿಕೆ ಬರುತ್ತದೆ. ಆದರೆ ಭಾರತ ವಿಶ್ವಕಪ್ ಗೆದ್ದಾಗ ಎಲ್ಲರೂ ಹೇಳುತ್ತಾರೆ, ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಗೆಲ್ಲಿಸಿದ್ದಾರೆ. ಹಾಗಾದರೆ ಉಳಿದ 10 ಮಂದಿ ಅಲ್ಲಿಗೆ ಲಸ್ಸಿ ಕುಡಿಯಲು ಹೋಗಿದ್ರಾ? ಗೌತಮ್ ಗಂಭೀರ್ ಏನು ಮಾಡಿದರು? ಉಳಿದ ಆಟಗಾರರು ಏನು ಮಾಡಿದರು ? ಕ್ರಿಕೆಟ್ ಟೀಮ್ ಗೇಮ್. ಒಂದು ತಂಡದ 7-8 ಮಂದಿ ಉತ್ತಮವಾಗಿ ಆಡಿದಾಗ ಮಾತ್ರ ಗೆಲ್ಲಲು ಸಾಧ್ಯ' ಎಂದು ಪ್ರತಿಕ್ರಿಯಿಸಿದ್ದಾರೆ.

2011ರಲ್ಲಿ ಶ್ರೀಲಂಕಾವನ್ನು ಮಣಿಸಿ ಭಾರತ ಏಕದಿನ ವಿಶ್ವಕಪ್ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.