ADVERTISEMENT

ಬಜಾಜ್ ಸ್ಕೂಟರ್‌ನೊಂದಿಗೆ ಸವಿ ನೆನಪುಗಳನ್ನು ಮೆಲಕು ಹಾಕಿದ ಅಜರುದ್ದಿನ್

ವೃತ್ತಿ ಆರಂಭದ ಸವಿ ನೆನಪು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2021, 8:24 IST
Last Updated 5 ಜೂನ್ 2021, 8:24 IST
ಮಹಮ್ಮದ್ ಅಜರುದ್ದಿನ್ ಅವರು ತಮ್ಮ ಬಜಾಜ್ ಸ್ಕೂಟರ್‌ನೊಂದಿಗೆ (ಟ್ವಿಟರ್ ಚಿತ್ರ)
ಮಹಮ್ಮದ್ ಅಜರುದ್ದಿನ್ ಅವರು ತಮ್ಮ ಬಜಾಜ್ ಸ್ಕೂಟರ್‌ನೊಂದಿಗೆ (ಟ್ವಿಟರ್ ಚಿತ್ರ)   

ಬೆಂಗಳೂರು: ಭಾರತ ತಂಡದ ಮಾಜಿ ಕ್ರಿಕೇಟಿಗ ಮಹಮ್ಮದ್ ಅಜರುದ್ದೀನ್ ಅವರು ಶುಕ್ರವಾರ ಟ್ವಿಟರ್‌ನಲ್ಲಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಬಜಾಜ್ ಚೇತಕ್ ಸ್ಕೂಟರ್ ನ ಮೂರು ಚಿತ್ರಗಳನ್ನು ಹಂಚಿಕೊಂಡು ಅದರೊಂದಿಗೆ ಕಳೆದ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

‘ನನ್ನ ವೃತ್ತಿ ಆರಂಭದ ಸವಿ ನೆನಪುಗಳಲ್ಲಿ ಇದೊಂದು (ಬಜಾಜ್ ಸ್ಕೂಟರ್) ಅವಿಷ್ಮರಣೀಯವಾದದ್ದು. ಇದನ್ನು ನಾನು ನನ್ನ ಹಿತೈಷಿಯೊಬ್ಬರಿಂದ ನನ್ನ ಪ್ರತಿಭೆಗೆ ಮನ್ನಣೆಯಾಗಿ ಪಡೆದಿದ್ದೆ. ಇದೇ ಸ್ಕೂಟರ್‌ನಲ್ಲಿ ನಾನು ಮೈದಾನಕ್ಕೆ ತೆರಳಿ ಕ್ರಿಕೆಟ್ ಅಭ್ಯಾಸ ನಡೆಸುತ್ತಿದ್ದೆ‘ ಎಂದು ಅಜರುದ್ದೀನ್ ಬರೆದುಕೊಂಡಿದ್ದಾರೆ.

ADVERTISEMENT

ಭಾರತ ಟೆಸ್ಟ್‌ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಅವರು ಭಾರತದ ಪರವಾಗಿ 99 ಟೆಸ್ಟ್‌ಪಂದ್ಯ, 334 ಏಕದಿನ ಪಂದ್ಯಗಳನ್ನುಆಡಿದ್ದಾರೆ. ಪ್ರಸ್ತುತ ಅವರು ರಾಜಕೀಯದಲ್ಲಿ ಸಕ್ರಿಯರಾಗಿರುವುದಲ್ಲದೇ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.