
ಗೌತಮ್ ಗಂಭೀರ್
(ಪಿಟಿಐ ಚಿತ್ರ)
ನವದೆಹಲಿ: ಮುಂದಿನ ವರ್ಷದ ಫೆಬ್ರುವರಿ–ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಮೂರು ತಿಂಗಳು ಮಾತರ ಭಾಕಿ ಉಳಿದಿವೆ. ಆದರೆ, ಟೀಂ ಇಂಡಿಯಾದ ಮುಖ್ಯ ತರಬೇತುದಾರರಾಗಿರುವ ಗೌತಮ್ ಗಂಭೀರ್, ಟಿ20 ವಿಶ್ವಕಪ್ ತಯಾರಿಗೆ ನಮ್ಮ ಬಳಿ ಇನ್ನೂ ಸಾಕಷ್ಟು ಸಮಯವಿದೆ ಎಂದು ಹೇಳಿದ್ದಾರೆ.
ಬಿಸಿಸಿಐ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಆಟಗಾರರು ಫಿಟ್‌ನೆಸ್ ಕಾಯ್ದುಕೊಳ್ಳುವುದರ ಮಹತ್ವದ ಕುರಿತು ಒತ್ತಿ ಹೇಳಿದ್ದಾರೆ.
‘ನಮ್ಮದು ತುಂಬ ಪಾರದರ್ಶಕ ಮತ್ತು ಪ್ರಾಮಾಣಿಕ ಡ್ರೆಸ್ಸಿಂಗ್ ಕೋಣೆಯಾಗಿದೆ. ಅದು ನಮ್ಮ ಅಪೇಕ್ಷೆಗೆ ತಕ್ಕಂತೆಯೇ ಇದೆ. ಟಿ20 ವಿಶ್ವಕಪ್‌ಗೆ ಕುರಿತು ಯೋಚಿಸಲು ಇನ್ನೂ ಸಮಯವಿದೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.
‘ಹುಡುಗರಿಗೆ ಫಿಟ್ ಆಗಿರುವುದರ ಮಹತ್ವ ತಿಳಿದಿದೆ. ನಾವು ಅಂದುಕೊಂಡಿರುವ ಸ್ಥಾನ ತಲುಪುಲು ನಮಗೆ ಇನ್ನು ಮೂರು ತಿಂಗಳು ಸಮಯವಿದೆ. ಆಟಗಾರರಿಗೆ ತಂಡದಲ್ಲಿ ತಮ್ಮ ಜವಾಬ್ದಾರಿ ಏನೆಂಬುದರ ಅರಿವಿದೆ’ ಎಂದಿದ್ದಾರೆ.
ಶುಭಮನ್ ಗಿಲ್ ಕುರಿತು ಮಾತನಾಡಿದ ಗಂಭೀರ್, ‘ಆಳ ಸಮುದ್ರಕ್ಕೆ ಒಬ್ಬ ವ್ಯಕ್ತಿಯನ್ನು ಎಸೆಯುವುದು ಎಷ್ಟು ಸುಲಭವೋ ಅಷ್ಟು ಸುಲಭವಾಗಿ ಗಿಲ್‌ರನ್ನು ನಾವು ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಿದೆವು’ ಎಂದಿದ್ದಾರೆ.
ಶುಭಮನ್ ಗಿಲ್ ನಾಯಕತ್ವ ವಹಿಸಿಕೊಂಡ ಮೊದಲ ಸರಣಿಯಲ್ಲೇ ಇಂಗ್ಲೆಂಡ್ ವಿರುದ್ಧ 2–2 ರಿಂದ ಸಮಬಲ ಸಾಧಿಸಿದರು. ಪ್ರತಿಯೊಂದು ಪಂದ್ಯವು 5 ದಿನಗಳವರೆಗೆ ನಡೆದಿರುವುದು ಗಮನಾರ್ಹ ಸಂಗತಿಯಾಗಿದೆ. ಮಾತ್ರವಲ್ಲ, ಈ ಸರಣಿಯಲ್ಲಿ ನಾಯಕನಾಗಿ ಗಿಲ್ ಗಮನಾರ್ಹ ಪ್ರದರ್ಶನ ತೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.