ADVERTISEMENT

5 ವರ್ಷದ ಮಗನಿಗೆ ಐಷಾರಾಮಿ ಕಾರು ಉಡುಗೊರೆ ನೀಡಿದ ಹಾರ್ದಿಕ್ ಪಾಂಡ್ಯ: ಬೆಲೆ ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2026, 7:16 IST
Last Updated 24 ಫೆಬ್ರುವರಿ 2026, 7:16 IST
<div class="paragraphs"><p>ಹಾರ್ದಿಕ್ ಪಾಂಡ್ಯ, ಮಗ&nbsp;</p></div>

ಹಾರ್ದಿಕ್ ಪಾಂಡ್ಯ, ಮಗ 

   

ಚಿತ್ರ: ಇನ್‌ಸ್ಟಾಗ್ರಾಂ

ಭಾರತ ಕ್ರಿಕೆಟ್ ತಂಡದ ತಾರಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಮಗನಿಗೆ ಐಷಾರಾಮಿ ಕಾರು ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ನತಾಶಾ ಸ್ಟಾಂಕೋವಿಕ್ ಜೊತೆಗೆ ವಿಚ್ಛೇದನ ಪಡೆದ ಬಳಿಕವೂ ಹಾರ್ದಿಕ್ ಪಾಂಡ್ಯ ತಮ್ಮ ಮಗನ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ತಮ್ಮ ವಿಚ್ಛೇದನದಿಂದ ಮಗನಿಗೆ ಪೋಷಕರ ಕೊರತೆ ಉಂಟಾಗಬಾರದೆಂದು ಇಬ್ಬರು ಮಗನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

ADVERTISEMENT

ಇದೀಗ ಹಾರ್ದಿಕ್ ಪಾಂಡ್ಯ ತಮ್ಮ ಮುದ್ದಾದ ಮಗ ಅಗಸ್ತ್ಯನಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಾರ್ದಿಕ್ ಮತ್ತು ನತಾಶಾ ಇಬ್ಬರೂ ತಮ್ಮ ಮಗನ ಫೋಟೊಗಳು ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಹಂಚಿಕೊಳ್ಳುತ್ತಾರೆ. ಸದ್ಯ ‘ಲ್ಯಾಂಡ್ ರೋವರ್_ಮುಂಬೈ’ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಹಾಗೂ ಮಗ ಅಗಸ್ತ್ಯನಿಗೆ ಮುಂಬೈನ ಶೋರೂಮ್ ಮಾಲೀಕರು ಕಾರಿನ ಕೀಲಿಗಳನ್ನು ಕೊಟ್ಟಿದ್ದಾರೆ. ಆಗ ನತಾಶಾ ಅವರು ಆ ಕೀಲಿಯನ್ನು ಸ್ವೀಕರಿಸುತ್ತಿರುವುದನ್ನು ಕಾಣಬಹುದು.

ಹಾರ್ದಿಕ್ ಪಾಂಡ್ಯ ಮಗ ಅಗಸ್ತ್ಯನಿಗೆ ಈಗ 5 ವರ್ಷ. ವರದಿ ಪ್ರಕಾರ, ಮಗನಿಗೆ ₹4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಐಷಾರಾಮಿ ಎಸ್‌ಯುವಿ ಕಾರ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೇ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇತ್ತೀಚೆಗೆ ಪಾಂಡ್ಯ ಅವರು ಮಹಿಕಾ ಶರ್ಮಾ ಜೊತೆ ಸಂಬಂಧದಲ್ಲಿರುವುದಾಗಿಯೂ ದೃಢಪಡಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಆಗಾಗ್ಗೆ ಗೆಳತಿ ಮಹಿಕಾ ಶರ್ಮಾ ಅವರೊಟ್ಟಿಗೆ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ಹಾರ್ದಿಕ್ ಪಾಂಡ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.