ADVERTISEMENT

ಕ್ಯಾಮೆರಾಮ್ಯಾನ್ ಭುಜಕ್ಕೆ ಬಡಿದ ಹಾರ್ದಿಕ್ ಬಾರಿಸಿದ ಸಿಕ್ಸರ್‌: ಮುಂದೇನಾಯ್ತು..?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2025, 7:11 IST
Last Updated 20 ಡಿಸೆಂಬರ್ 2025, 7:11 IST
<div class="paragraphs"><p>ಹಾರ್ದಿಕ್ ಪಾಂಡ್ಯ</p></div>

ಹಾರ್ದಿಕ್ ಪಾಂಡ್ಯ

   

(ಪಿಟಿಐ ಚಿತ್ರ)

ಅಹಮದಾಬಾದ್: ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ, ಭಾರತದ ಪರ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಸ್ಫೋಟಕ ಅರ್ಧಶತಕ ಸಿಡಿಸಿ ದಾಖಲೆ ಮಾಡಿದರು. ಈ ವೇಳೆ ಅವರು ಬಾರಿಸಿದ ಸಿಕ್ಸರ್ ಒಂದು ಕ್ರೀಡಾಂಗಣದಲ್ಲಿ ಕ್ಯಾಮೆರಾ ನಿರ್ವಹಣೆ ಮಾಡುತ್ತಿದ್ದ ಕ್ಯಾಮೆರಾಮ್ಯಾನ್ ಭುಜಕ್ಕೆ ಬಡಿಯಿತು. ಈ ಘಟನೆಯ ಬಳಿಕ ಹಾರ್ದಿಕ್ ಪಾಂಡ್ಯ ನಡೆದುಕೊಂಡ ರೀತಿ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ.

ADVERTISEMENT

ಹಾರ್ದಿಕ್ ಪಾಂಡ್ಯ ಅವರು, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಶುಭಾರಂಭ ಮಾಡಿದರು. ಆದರೆ, ಅವರು ಬಾರಿಸಿದ ಅದೇ ಸಿಕ್ಸರ್ ನೇರವಾಗಿ ಕ್ಯಾಮೆರಾಮ್ಯಾನ್ ಭುಜಕ್ಕೆ ಬಡಿಯುತ್ತದೆ.

ದಕ್ಷಿಣ ಆಫ್ರಿಕಾದ ವೇಗಿ ಕಾರ್ಬಿನ್ ಬಾಷ್​ ಎಸೆದ 13ನೇ ಓವರ್​ನ 2ನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಬಾರಿಸಿದ ಫ್ಲಾಟ್ ಸಿಕ್ಸರ್, ಕ್ಯಾಮೆರಾಮ್ಯಾನ್​ಗೆ ಬಡಿದಿದೆ. ತಕ್ಷಣವೇ ಭಾರತ ಕ್ರಿಕೆಟ್ ತಂಡದ ವೈದ್ಯಕೀಯ ಸಿಬ್ಬಂದಿಗಳು ಅವರನ್ನು ಆರೈಕೆ ಮಾಡಿದರು.

ಪಂದ್ಯ ಮುಕ್ತಾಯದ ಬಳಿಕ ಕ್ಯಾಮೆರಾಮ್ಯಾನ್​ ಬಳಿ ತೆರಳಿದ ಹಾರ್ದಿಕ್ ಪಾಂಡ್ಯ, ಕ್ಯಾಮೆರಾಮ್ಯಾನ್ ಅವರನ್ನು ಅಪ್ಪಿಕೊಂಡು ಕೈ ಮುಗಿದು ಕ್ಷಮೆಯಾಚಿಸಿದ್ದಾರೆ. ಪಾಂಡ್ಯರ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿದಾಡುತ್ತಿದೆ.

ಇನ್ನು ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯ, ಕೇವಲ 25 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 63 ರನ್ ಬಾರಿಸಿದರು. ಈ ಅಮೋಘ ಪ್ರದರ್ಶನದಿಂದಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.