ADVERTISEMENT

ಪಾಕ್ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಕಿವೀಸ್ ತಂಡಕ್ಕೆ ಆಸರೆಯಾದ ನಿಶಾಮ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 14:28 IST
Last Updated 26 ಜೂನ್ 2019, 14:28 IST
   

ಬರ್ಮಿಂಗಂ: ಸತತ ಗೆಲುವು ಸಾಧಿಸಿದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ನ್ಯೂಜಿಲೆಂಡ್‌ ತಂಡ ಆರಂಭದಲ್ಲಿಪಾಕಿಸ್ತಾನದ ಬೌಲಿಂಗ್ ದಾಳಿಗೆ ತತ್ತರಿಸಿದ್ದು, ನಿಶಾಮ್ -ಗ್ರ್ಯಾಂಡ್‌ಹೋಮ್ ಜೋಡಿಯ ಸಂಯಮದಆಟದ ಸಹಾಯದಿಂದ 6 ವಿಕೆಟ್ ನಷ್ಟಕ್ಕೆ 237 ರನ್ ದಾಖಲಿಸಿದೆ. ಪಿಚ್ ತೇವ ಇದ್ದುದರಿಂದ ಟಾಸ್ ತಡವಾಗಿದ್ದು ಮಾತ್ರವಲ್ಲದೇ ಪಂದ್ಯ ವಿಳಂಬವಾಗಿ ಆರಂಭವಾಗಿತ್ತು.

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.ಆರಂಭಿಕ ದಾಂಡಿಗರಾಗಿ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ ಕಣಕ್ಕಿಳಿದಿದ್ದರು.ಎರಡನೇ ಓವರ್‌ನಲ್ಲಿ ಗಫ್ಟಿಲ್ ವಿಕೆಟ್ ಕಬಳಿಸುವ ಮೂಲಕ ಮೊಹಮ್ಮದ್ ಅಮೀರ್ ನ್ಯೂಜಿಲೆಂಡ್ ಪಡೆಗೆ ಭಯ ಹುಟ್ಟಿಸಿದರು.ನಂತರ ಏಳನೇ ಓವರ್‌ನಲ್ಲಿ ಮನ್ರೋ, 9ನೇ ಓವರ್‌ನಲ್ಲಿ ರಾಸ್ ಟೇಲರ್ ಮತ್ತು 13ನೇ ಓವರ್‌ನಲ್ಲಿ ಟಾಮ್ ಲಥಾಮ್ ವಿಕೆಟ್ ಕಳೆದುಕೊಂಡರು.ಒಬ್ಬರ ಹಿಂದೆ ಮತ್ತೊಬ್ಬರು ಪೆವಿಲಿಯನ್‌ಗೆ ಹೆಜ್ಜೆ ಹಾಕಿದಾಗ ಕ್ರೀಸ್‌ನಲ್ಲಿ ಸ್ವಲ್ಪ ಹೊತ್ತು ನಿಂತು ತಂಡದ ಸ್ಕೋರ್ ಏರಿಸಿದ್ದು ನಾಯಕ ವಿಲಿಯಮ್ಸನ್ ಮಾತ್ರ. 69 ಎಸೆತಗಳಲ್ಲಿ 41 ರನ್ ಗಳಿಸಿದ್ದ ವಿಲಿಯಮ್ಸನ್‌ವಿಕೆಟ್ ಕಬಳಿಸಿದ್ದು ಶಾದಾಬ್ ಖಾನ್.

5 ವಿಕೆಟ್ ಕಳೆದುಕೊಂಡು ದಯನೀಯ ಪರಿಸ್ಥಿತಿಯಲ್ಲಿದ್ದ ತಂಡದ ಸ್ಕೋರ್ ಏರಿಸಿದ್ದುಜಿಮ್ಮಿ ನಿಶಾಮ್ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಜೋಡಿ.ಸಂಯಮದ ಆಟ ಪ್ರದರ್ಶಿಸಿದ ಈ ಜೋಡಿ ತಂಡದ ಮೊತ್ತ 200 ದಾಟುವಂತೆ ಮಾಡಿತು. 48ನೇ ಓವರ್‌ನಲ್ಲಿಗ್ರ್ಯಾಂಡ್‌ಹೋಮ್ ರನೌಟ್ ಆಗುವ ಮೂಲಕ ಕಿವೀಸ್ 6ನೇ ವಿಕೆಟ್ ಕಳೆದುಕೊಂಡಿತು. ಉತ್ತಮ ಪ್ರದರ್ಶನ ನೀಡಿದಗ್ರ್ಯಾಂಡ್‌ಹೋಮ್ 71 ಎಸೆತಗಳಲ್ಲಿ 64 ರನ್ ದಾಖಲಿಸಿದ್ದಾರೆ.

ADVERTISEMENT

ಕೊನೆಯ ಎರಡು ಓವರ್ ಉಳಿದಿರುವಾಗ ನಿಶಾಮ್ ಜತೆಯಾಗಲು ಬಂದಮಿಷೆಲ್ ಸ್ಯಾಂಟನರ್ 5 ಎಸೆತಗಳಲ್ಲಿ 5 ರನ್‌ಗಳಿಸಿದ್ದಾರೆ. ಆರಂಭಿಕ ಆಘಾತದಿಂದಮಂಕಾಗಿದ್ದ ಕಿವೀಸ್ ತಂಡದ ಸ್ಕೋರ್ ಏರಿಸಿ ಉತ್ತಮ ಆಟ ಪ್ರದರ್ಶಿಸಿದ ಜಿಮ್ಮಿ ನಿಶಾಮ್ 112 ಎಸೆತಗಳಲ್ಲಿ 97 ರನ್ ಗಳಿಸಿ ಅಜೇಯರಾಗಿ ಉಳಿದರು.

ಪಾಕಿಸ್ತಾನದ ಪರವಾಗಿ ಶಾಹೀನ್ ಅಫ್ರಿದಿ- 3, ಮೊಹಮ್ಮದ್ ಅಮೀರ್ -1, ಶಾದಾಬ್ ಖಾನ್- 1 ವಿಕೆಟ್ ಗಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.