ADVERTISEMENT

T20 World Cup: ಸೂರ್ಯಕುಮಾರ್ ಫಿಫ್ಟಿ: ಅಮೆರಿಕ ಗೆಲುವಿಗೆ 162 ರನ್ ಟಾರ್ಗೆಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2026, 13:29 IST
Last Updated 7 ಫೆಬ್ರುವರಿ 2026, 13:29 IST
<div class="paragraphs"><p>ಸೂರ್ಯಕುಮಾರ್ ಯಾದವ್</p></div>

ಸೂರ್ಯಕುಮಾರ್ ಯಾದವ್

   

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ವಿರುದ್ಧ ಭಾರತ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಅಮೆರಿಕ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 161 ರನ್ ಗಳಿಸಿದೆ.

ADVERTISEMENT

ಟೀಮ್ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಅವರನ್ನು ಔಟ್ ಮಾಡುವ ಮೂಲಕ ಶ್ಯಾಡ್ಲಿ ವ್ಯಾನ್ ಶಾಲ್ಕವೈಕ್ ಆಘಾತ ನೀಡಿದರು. ಬಳಿಕ ಬಂದ ತಿಲಕ್ ವರ್ಮಾ, ಶಿವಂ ದುಬೆ ಅವರಿಗೂ ಶಾಲ್ಕವೈಕ್ ಪೇವಿಲಿಯನ್ ಹಾದಿ ತೋರಿಸಿದರು.

ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರು ಮತ್ತೊಂದೆಡೆ ನಾಯಕ ಸೂರ್ಯಕುಮಾರ್ ಯಾದವ್ ಔಟಾಗದೆ 49 ಎಸೆತಗಳಲ್ಲಿ 4 ಸಿಕ್ಸರ್, 10 ಬೌಂಡರಿ ಸಹಿತ 84 ರನ್ ಗಳಿಸಿದರು.

ಅಮೆರಿಕ ಪರ ಶ್ಯಾಡ್ಲಿ ವ್ಯಾನ್ ಶಾಲ್ಕವೈಕ್ 4, ಹರಮೀತ್ ಸಿಂಗ್ 2, ಅಲಿ ಖಾನ್ ಹಾಗೂ ಮೊಹಮ್ಮದ್ ಮೊಹ್ಸಿನ್ ತಲಾ ಒಂದೊಂದು ವಿಕೆಟ್ ಪಡೆದರು.

‘ಹಾಲಿ ಚಾಂಪಿಯನ್’ ಆಗಿರುವ ಭಾರತ ತಂಡ ಸತತ ಎರಡನೇ ಬಾರಿ ಟಿ20 ಕಿರೀಟ ಧರಿಸಿದ ಸಾಧನೆ ಮಾಡುವ ಹುಮ್ಮಸಿನಲ್ಲಿದೆ. ಅಲ್ಲದೇ ತವರಿನಂಗಳದಲ್ಲಿ ಟಿ20 ಟ್ರೋಫಿ ಜಯಿಸಿದ ಪ್ರಥಮ ತಂಡವಾಗುವ ನಿರೀಕ್ಷೆಯೂ ನಾಯಕ ಸೂರ್ಯಕುಮಾರ್ ಯಾದವ್ ಪಡೆ ಮೇಲೆ ಇದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ 2024ರಲ್ಲಿ ತಂಡವು ಚಾಂಪಿಯನ್ ಆಗಿತ್ತು. ಭಾರತ ತಂಡದ ಇಬ್ಬರು ಆಧಾರ ಸ್ತಂಭಗಳಾಗಿದ್ದ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅವರು ನಿವೃತ್ತಿಯಾಗಿದ್ದಾರೆ. ಆದ್ದರಿಂದ ಅವರ ಸ್ಥಾನವನ್ನು ತುಂಬುವ ಅವಕಾಶ ಯುವ ಆಟಗಾರರಿಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.