ADVERTISEMENT

2021ರ ಟಿ20 ವಿಶ್ವಕಪ್‌ನಲ್ಲಿ ಚೇಸಿಂಗ್ ಪ್ರಾಬಲ್ಯ; ಐಸಿಸಿಗೆ ಗಾವಸ್ಕರ್ ಸಲಹೆಯೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ನವೆಂಬರ್ 2021, 8:32 IST
Last Updated 16 ನವೆಂಬರ್ 2021, 8:32 IST
ಸುನೀಲ್ ಗಾವಸ್ಕರ್
ಸುನೀಲ್ ಗಾವಸ್ಕರ್   

ಯುಎಇಯಲ್ಲಿ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡಗಳಿಗಿಂತ ಗುರಿ ಬೆನ್ನತ್ತುವ ತಂಡಗಳು ಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವದಿಗ್ಗಜ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಎರಡೂ ತಂಡಗಳಿಗೆ ಸಮಬಲದ ಹೋರಾಟ ನೀಡಲು ಸಾಧ್ಯವಾಗುವಂತಹ ಪಿಚ್‌ಗಳ ನಿರ್ಮಾಣದತ್ತ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಗಮನ ಹರಿಸಬೇಕು ಎಂದುಸಲಹೆ ನೀಡಿದ್ದಾರೆ.

ಭಾನುವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಅಂತರದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, ಮೊದಲ ಬಾರಿಗೆ ಚುಟುಕು ವಿಶ್ವಕಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಟೂರ್ನಿಯ ಒಟ್ಟು45 ಪಂದ್ಯಗಳ ಪೈಕಿ 29ರಲ್ಲಿ ಚೇಸಿಂಗ್ ಮಾಡಿದ ತಂಡಗಳೇ ಗೆಲುವು ಸಾಧಿಸಿವೆ. ಫೈನಲ್‌ ಮತ್ತುಎರಡು ಸೆಮಿಫೈನಲ್‌ಗಳಲ್ಲಿಯೂ ಗುರಿ ಬೆನ್ನತ್ತಿದ ತಂಡಗಳೇ ಜಯ ಕಂಡಿವೆ. ಜೊತೆಗೆ ಟಾಸ್‌ ಗೆದ್ದ ತಂಡಗಳು ಮೊದಲು ಬೌಲಿಂಗ್ ಮಾಡಲು ಮುಂದಾಗುತ್ತಿದ್ದವು. ಯುಎಇ ಪಿಚ್‌ಗಳು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡಕ್ಕೆ ನೆರವು ನೀಡುತ್ತಿವೆ ಎಂಬುದನ್ನು ಈ ಅಂಶಗಳು ಪುಷ್ಟೀಕರಿಸುತ್ತವೆ.

ADVERTISEMENT

ಹೀಗಾಗಿ ಗಾವಸ್ಕರ್ ಅವರು, ಸ್ಪರ್ಧಾತ್ಮಕ ಪಿಚ್‌ಗಳ ನಿರ್ಮಾಣಕ್ಕೆ ಒತ್ತು ನೀಡುವಂತೆ ಐಸಿಸಿಗೆ ಸಲಹೆ ನೀಡಿದ್ದಾರೆ.

ಒಟ್ಟು 26 ಪಂದ್ಯಗಳು ರಾತ್ರಿ ವೇಳೆ ನಡೆದಿವೆ. ಈ ಪೈಕಿ 16 ಪಂದ್ಯಗಳಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡಗಳಿಗೆ ಜಯ ದೊರೆತಿದೆ. ಹೀಗಾಗಿ ಕೆಲವರು, ರಾತ್ರಿವೇಳೆ ಇಬ್ಬನಿ ಬೀಳುವುದರಿಂದ ಚೇಸಿಂಗ್ ತಂಡಗಳಿಗೆ ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದಾಗ್ಯೂ, ಇಬ್ಬನಿಯ ಅಂಶ ಅಷ್ಟೇನೂ ಪರಿಣಾಮ ಬೀರಿಲ್ಲ ಎಂದು ನನಗನಿಸುತ್ತದೆ ಎಂದು ಗಾವಸ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.