ADVERTISEMENT

ICC ಟಿ20 ರ‍್ಯಾಂಕಿಗ್‌ನಲ್ಲಿ ಏರಿಕೆ ಕಂಡ ಶಫಾಲಿ, ನಂ.1 ಸ್ಥಾನದಲ್ಲಿ ದೀಪ್ತಿ

ಪಿಟಿಐ
Published 30 ಡಿಸೆಂಬರ್ 2025, 9:47 IST
Last Updated 30 ಡಿಸೆಂಬರ್ 2025, 9:47 IST
ಭಾರತ ತಂಡದ ಶಫಾಲಿ ವರ್ಮಾ, ಪೂಜಾ ವಸ್ತ್ರಕರ್ ಮತ್ತು ದೀಪ್ತಿ ಶರ್ಮಾ  –ಪಿಟಿಐ ಚಿತ್ರ
ಭಾರತ ತಂಡದ ಶಫಾಲಿ ವರ್ಮಾ, ಪೂಜಾ ವಸ್ತ್ರಕರ್ ಮತ್ತು ದೀಪ್ತಿ ಶರ್ಮಾ  –ಪಿಟಿಐ ಚಿತ್ರ   

ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರು ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಸತತ 3 ಅರ್ಧಶತಕ ಸಿಡಿಸಿದ ಬಳಿಕ ಐಸಿಸಿ ಮಹಿಳಾ ಟಿ20ಐ ಆಟಗಾರ್ತಿಯರ ಶ್ರೇಯಾಂಕದಲ್ಲಿ 6ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ, ಎರಡನೇ ಟಿ20 ಪಂದ್ಯದಲ್ಲಿ ಅಜೇಯ 69 ರನ್, 3 ಮತ್ತು 4ನೇ ಪಂದ್ಯಗಳಲ್ಲಿ ಕ್ರಮವಾಗಿ 42 ಎಸೆತಗಳಲ್ಲಿ 79 ಮತ್ತು 46 ಎಸೆತಗಳಲ್ಲಿ 79 ರನ್ ಗಳಿಸಿದ ಬಳಿಕ ಟಿ20 ರ‍್ಯಾಂಕಿಂಗ್‌ನಲ್ಲಿ ನಾಲ್ಕು ಸ್ಥಾನ ಏರಿಕೆ ಕಂಡು 6ನೇ ಸ್ಥಾನಕ್ಕೇರಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಮೂರು ಪಂದ್ಯಗಳಲ್ಲಿ ದೊಡ್ಡ ಮೊತ್ತ ಕಲೆಹಾಕಲು ವಿಫಲರಾಗಿದ್ದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಅವರು, 4ನೇ ಪಂದ್ಯದಲ್ಲಿ ಸ್ಫೋಟಕ 80 ರನ್ ಗಳಿಸುವ ಮೂಲಕ ಟಿ20 ಶ್ರೇಯಾಂಕದಲ್ಲಿ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕದ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಒಂದು ಸ್ಥಾನ ಕುಸಿದು 10ನೇ ಸ್ಥಾನಕ್ಕೆ ಇಳಿದಿದ್ದಾರೆ.

ADVERTISEMENT

ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಅನುಭವಿ ಆಲ್‌ರೌಂಡರ್ ದೀಪ್ತಿ ಶರ್ಮಾ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಅವರ ಜೊತೆ ರೇಣುಕಾ ಸಿಂಗ್ ಠಾಕೂರ್ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.