ADVERTISEMENT

ಐಸಿಸಿ ಟಿ20 ರ‍್ಯಾಂಕಿಂಗ್: ಅಭಿಷೇಕ್, ವರುಣ್ ಅಗ್ರಸ್ಥಾನ ಅಬಾಧಿತ

ಪಿಟಿಐ
Published 5 ನವೆಂಬರ್ 2025, 13:05 IST
Last Updated 5 ನವೆಂಬರ್ 2025, 13:05 IST
   

ದುಬೈ: ಆಕ್ರಮಣಕಾರಿ ಆಟವಾಡುವ ಆರಂಭ ಆಟಗಾರ ಅಭಿಷೇಕ್‌ ಶರ್ಮಾ ಮತ್ತು ‘ವಿಸ್ಮಯ’ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಬುಧವಾರ ಪ್ರಕಟವಾದ ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್‌ನಲ್ಲಿ ಕ್ರಮವಾಗಿ ಬ್ಯಾಟರ್‌ಗಳ ಮತ್ತು ಬೌಲರ್‌ಗಳ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಅಭಿಷೇಕ್‌ 925 ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದು, ಇಂಗ್ಲೆಂಡ್‌ನ ಫಿಲ್‌ ಸಾಲ್ಟ್‌ ಮತ್ತು ತಿಲಕ್‌ ವರ್ಮಾ ಅವರಿಗಿಂತ ಮುಂದೆಯಿದ್ದಾರೆ. ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್‌ ಅವರು ಎಂಟನೇ ಸ್ಥಾನದಲ್ಲಿದ್ದು, ಅಗ್ರ 10ರಲ್ಲಿ ಸ್ಥಾನ ಪಡೆದಿರುವ ಭಾರತದ ಮತ್ತೊಬ್ಬ ಆಟಗಾರ ಎನಿಸಿದ್ದಾರೆ.

ಸ್ಪಿನ್ನರ್ ಚಕ್ರವರ್ತಿ ಅಗ್ರಸ್ಥಾನ ಅಬಾಧಿತವಾಗಿ ಉಳಿದಿದೆ. ವೆಸ್ಟ್‌ ಇಂಡೀಸ್‌ನ್ ಅಖೀಲ್ ಹುಸೇನ್ ಮತ್ತು ಅಫ್ಗಾನಿಸ್ತಾನದ ರಶೀದ್‌ ಖಾನ್ ನಂತರದ ಸ್ಥಾನಗಳಲ್ಲಿದ್ದಾರೆ. ಭಾರತದ ಇತರ ಯಾವುದೇ ಬೌಲರ್ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ.

ADVERTISEMENT

ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾದ ವೇಗಿ ಜೋಶ್‌ ಹ್ಯಾಜಲ್‌ವುಡ್‌ ಎರಡು ಸ್ಥಾನ ಬಡ್ತಿ ಪಡೆದು ಹತ್ತನೇ ಸ್ಥಾನಕ್ಕೇರಿದ್ದಾರೆ. 

ಆಲ್‌ರೌಂಡರ್‌ಗಳ ಯಾದಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರನ್ನು ಬಿಟ್ಟರೆ ಅಗ್ರ 10ರಲ್ಲಿ ಭಾರತದ ಯಾವುದೇ ಆಟಗಾರ ಸ್ಥಾನ ಪಡೆದಿಲ್ಲ. ಈ ವಿಭಾಗದಲ್ಲಿ ಪಾಕಿಸ್ತಾನದ ಸಯೀಮ್ ಅತೂಬ್ ಅಗ್ರಸ್ಥಾನದಲ್ಲಿದ್ದಾರೆ. ಜಿಂಬಾಬ್ವೆಯ ಸಿಕಂದರ್ ರಝಾ ಮತ್ತು ವೆಸ್ಟ್‌ ಇಂಡೀಸ್‌ನ ರೋಸ್ಟನ್ ಚೇಸ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.