ADVERTISEMENT

ICC T20 Ranking | 2ನೇ ಸ್ಥಾನಕ್ಕೇರಿದ ರಾಹುಲ್: ಅಗ್ರ ಹತ್ತರಲ್ಲಿ ಭಾರತದ ಮೂವರು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 12:33 IST
Last Updated 3 ಫೆಬ್ರುವರಿ 2020, 12:33 IST
   

ನವದೆಹಲಿ: ಇತ್ತೀಚೆಗೆ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದಟಿ20 ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದ ಕನ್ನಡಿಗ ಕೆ.ಎಲ್‌.ರಾಹುಲ್ ಐಸಿಸಿ ಬಿಡುಗಡೆ ಮಾಡಿರುವಟಿ20 ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಐದು ಪಂದ್ಯಗಳ ಸರಣಿಯಲ್ಲಿ 224 ರನ್ ಗಳಿಸಿಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿಕೊಂಡಿದ್ದರಾಹುಲ್‌, 4 ಸ್ಥಾನ ಮೇಲೇರಿದ್ದಾರೆ.ಈ ಪಟ್ಟಿಯಲ್ಲಿ ಪಾಕಿಸ್ತಾನದ ಯುವ ಬ್ಯಾಟ್ಸ್‌ಮನ್‌ ಬಾಬರ್‌ ಅಜಂ ಮೊದಲ ಸ್ಥಾನದಲ್ಲಿದ್ದಾರೆ. ಬಾಬರ್‌ ಖಾತೆಯಲ್ಲಿ 879 ಅಂಕಗಳು ಇವೆ ರಾಹಲ್‌ ಖಾತೆಯಲ್ಲಿ 823 ಪಾಯಿಂಟ್‌ಗಳಿವೆ. ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್‌ ಫಿಂಚ್‌ (810)ಮೂರನೇ ಸ್ಥಾನಕ್ಕೆ ಜಾರಿದ್ದಾರೆ.

ಸದ್ಯ ಭಾರತದ ಮೂವರು ಬ್ಯಾಟ್ಸ್‌ಮನ್‌ಗಳು ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ.ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (673) 9ನೇ ಸ್ಥಾನದಲ್ಲಿ ಮುಂದುವರಿದಿದ್ದು,3 ಸ್ಥಾನ ಮೇಲೇರಿರುವ ರೋಹಿತ್ ಶರ್ಮಾ (662) 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಯುವ ಪ್ರತಿಭೆ ಶ್ರೇಯಸ್‌ ಅಯ್ಯರ್‌ 63ನೇ ಸ್ಥಾನದಿಂದ 55ಕ್ಕೆ ಏರಿದ್ದಾರೆ.ಮನೀಷ್‌ ಪಾಂಡೆ 12 ಸ್ಥಾನಮೇಲೇರಿ 58ಕ್ಕೆ ತಲುಪಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ಅಫ್ಗಾನಿಸ್ಥಾನದ ಸ್ಪಿನ್ನರ್‌ ರಶೀದ್‌ ಖಾನ್‌ (749) ಮೊದಲ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ಮುಜೀಬ್‌ ಉರ್‌ ರಹ್‌ಮಾನ್‌ (742), ನ್ಯೂಜಿಲೆಂಡ್‌ನ ಮಿಚೇಲ್‌ ಸ್ಯಾಂಟ್ನರ್‌(677)ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಭಾರತದ ಜಸ್‌ಪ್ರೀತ್ ಬೂಮ್ರಾ 26 ಸ್ಥಾನ ಏರಿಕೆಯೊಂದಿಗೆ 11ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಯಜುವೇಂದ್ರ ಚಾಹಲ್‌ 30, ಶಾರ್ದೂಲ್‌ ಠಾಕೂರ್‌ 57, ನವದೀಪ್ ಶೈನಿ 71 ಹಾಗೂ ರವೀಂದ್ರ ಜಡೇಜಾ 74ನೇ ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.