ADVERTISEMENT

ಮಹಿಳಾ ವಿಶ್ವಕಪ್ ಫೈನಲ್: ಅಲಿಸಾ ಹೀಲಿ ಭರ್ಜರಿ ಶತಕ, ಇಂಗ್ಲೆಂಡ್‌ಗೆ 357 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಏಪ್ರಿಲ್ 2022, 4:54 IST
Last Updated 3 ಏಪ್ರಿಲ್ 2022, 4:54 IST
ಆಸ್ಟ್ರೇಲಿಯಾದ ಅಲಿಸಾ ಹೀಲಿ ಮತ್ತು ರಚೆಲ್ ಹೇನ್ಸ್ –ಎಎಫ್‌ಪಿ ಚಿತ್ರ
ಆಸ್ಟ್ರೇಲಿಯಾದ ಅಲಿಸಾ ಹೀಲಿ ಮತ್ತು ರಚೆಲ್ ಹೇನ್ಸ್ –ಎಎಫ್‌ಪಿ ಚಿತ್ರ   

ಕ್ರೈಸ್ಟ್ ಚರ್ಚ್‌: ಐಸಿಸಿ ಮಹಿಳೆಯರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇಂದು (ಭಾನುವಾರ) ನಡೆಯುತ್ತಿರುವ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಆಸ್ಟ್ರೇಲಿಯಾ, 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 356 ರನ್ ಗಳಿಸಿದೆ.

ಆಸ್ಟ್ರೇಲಿಯಾ ಪರ ಅಲಿಸಾ ಹೀಲಿ ಶತಕ (170) ಸಿಡಿಸಿ ಸಂಭ್ರಮಿಸಿದರು. 138 ಎಸೆತಗಳನ್ನು ಎದುರಿಸಿದ ಹೀಲಿ ಇನ್ನಿಂಗ್ಸ್‌ನಲ್ಲಿ 26 ಬೌಂಡರಿಗಳು ಸೇರಿದ್ದವು.

ADVERTISEMENT

ರಚೆಲ್ ಹೇನ್ಸ್ 68, ಬೆಥ್ ಮೂನಿ 62 ರನ್‌ ಗಳಿಸಿ ಅಲಿಸಾಗೆ ಸಾಥ್ ನೀಡಿದರು. ಎಲಿಸ್ ಪೆರಿ 17, ಮೆಗ್‌ ಲ್ಯಾನಿಂಗ್ 10 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಇಂಗ್ಲೆಂಡ್ ಪರ ಅನ್ಯಾ ಶ್ರಬ್‌ಸೋಲ್ 3, ಸೋಫಿ ಎಕ್ಲೆಸ್ಟೋನ್‌ 1 ವಿಕೆಟ್ ಪಡೆದರು.

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಉಭಯ ತಂಡಗಳು ಫೈನಲ್‌ನಲ್ಲಿ ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.