ADVERTISEMENT

ಸಾಮಾಜಿಕ ಜಾಲತಾಣದಿಂದ ದೂರ ಸರಿದ ಪುಕೊವಸ್ಕಿ

ಪಿಟಿಐ
Published 14 ನವೆಂಬರ್ 2020, 14:31 IST
Last Updated 14 ನವೆಂಬರ್ 2020, 14:31 IST
ವಿಲ್ ಪುಕೊವಸ್ಕಿ
ವಿಲ್ ಪುಕೊವಸ್ಕಿ   

ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡದ ಎದುರಿನ ಸರಣಿಯಲ್ಲಿ ಆಡಲಿರುವ ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ ವಿಲ್ ಪುಕೊವಸ್ಕಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಸ್ವಯಂ ನಿರ್ಬಂಧ ಹಾಕಿದ್ದಾರೆ.

ತಮ್ಮ ಭವಿಷ್ಯ ಮತ್ತು ತಂಡದ ದೃಷ್ಟಿಯಿಂದ ಅಪಾರ ಏಕಾಗ್ರತೆಯೊಂದಿಗೆ ಕಣಕ್ಕಿಳಿಯುವ ಉದ್ದೇಶದೊಂದಿಗೆ ಈ ಕ್ರಮಕ್ಕೆ ಮುಂದಾಗಿದ್ದಾರೆ. ಶೇಫಿಲ್ಡ್ ಶೀಲ್ಡ್ ಟೂರ್ನಿಯಲ್ಲಿ ಅವರು ಉತ್ತಮವಾಗಿ ಆಡಿದ್ದರಿಂದ ಆಸ್ಟ್ರೇಲಿಯಾ ತಂಡದಲ್ಲಿ ಅವಕಾಶ ಲಭಿಸಿದೆ.

’ನನ್ನ ಸಿದ್ಧತೆಗಳಿಗೆ ತಕ್ಕಂತೆ ಪಂದ್ಯಗಳಲ್ಲಿ ಸಾಮರ್ಥ್ಯ ಪ್ರದರ್ಶನ ಇರುತ್ತದೆ. ಸದ್ಯ ನನ್ನ ಬ್ಯಾಟಿಂಗ್ ಫಾರ್ಮ್ ಚೆನ್ನಾಗಿದೆ. ಆದ್ದರಿಂದ ಚಿತ್ತ ಚಾಂಚಲ್ಯ ಉಂಟಾಗದಂತೆ ನೋಡಿಕೊಳ್ಳುವುದು ಅವಶ್ಯಕ. ಆದ್ದರಿಂದಲೇ ಸಾಮಾಜಿಕ ಜಾಲತಾಣ ಖಾತೆಗಳನ್ನು ಬಂದ್ ಮಾಡಿದ್ದೇನೆ. ಆ್ಯಪ್‌ ತೆಗೆದಿದ್ದೇನೆ‘ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಈಚೆಗೆ ಆಯ್ಕೆ ಮಾಡಲಾದ 17 ಆಟಗಾರರ ತಂಡದಲ್ಲಿ ಯುವ ಆಟಗಾರರಾದ ಪುಕೊವಸ್ಕಿ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನೂ ಆಯ್ಕೆ ಮಾಡಲಾಗಿತ್ತು. ಡಿಸೆಂಬರ್ 17ರಿಂದ ಭಾರತದ ಎದುರು ನಡೆಯುವ ಟೆಸ್ಟ್ ಸರಣಿಯಲ್ಲಿ ಇವರು ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.