ADVERTISEMENT

ಆಸೀಸ್ ಬೌಲರ್‌ಗಳ ಮಾರಕ ದಾಳಿ; ರಿಷಭ್‌ಗೆ ಸತತ ಏಟು; ಕಡೆಗೂ ಔಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2025, 5:32 IST
Last Updated 3 ಜನವರಿ 2025, 5:32 IST
<div class="paragraphs"><p>ರಿಷಭ್ ಪಂತ್</p></div>

ರಿಷಭ್ ಪಂತ್

   

(ಎಕ್ಸ್ ಚಿತ್ರ)

ಸಿಡ್ನಿ: ಪ್ರವಾಸಿ ಭಾರತ ತಂಡದ ವಿರುದ್ಧ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳು ಮಾರಕ ದಾಳಿ ಸಂಘಟಿಸಿದ್ದಾರೆ.

ADVERTISEMENT

ಮೊದಲ ದಿನದಾಟದಲ್ಲೇ ಭಾರತೀಯ ಬ್ಯಾಟರ್‌ಗಳನ್ನು ಕಾಡಿದ್ದಾರೆ.

ಈ ಪೈಕಿ ಕ್ರೀಸಿನಲ್ಲಿ ದಿಟ್ಟ ಹೋರಾಟ ತೋರಿದ ರಿಷಭ್ ಪಂತ್‌ಗೆ ಸತತವಾಗಿ ಚೆಂಡು ಬಡಿದು ಏಟು ತಗುಲಿದೆ. ಈ ಸಂಬಂಧ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ರಿಷಭ್ ಪಂತ್ ದೇಹದ ಎಲ್ಲ ಭಾಗಗಳಿಗೂ ಚೆಂಡಿನ ಏಟು ತಗುಲಿದೆ. ಪುಟಿದೆದ್ದ ಚೆಂಡು ಒಮ್ಮೆ ಪಂತ್ ಅವರ ಕೈಗೆ ಬಡಿದರೆ ಮಗದೊಮ್ಮೆ ಹೆಲ್ಮೆಟ್‌ಗೆ ಬಡಿಯಿತು. ದೇಹ ಹಾಗೂ ಕೈಯಲ್ಲಿ ಕೆಂಪು ಕಲೆ ದಾಖಲಾಯಿತು.

ನೋವನ್ನು ತಡೆಯಲಾರದೇ ಪಂತ್ ಕುಂಟುತ್ತಾ ಸಾಗುತ್ತಿರುವ ದೃಶ್ಯವು ಕಂಡುಬಂದಿದೆ. ಇದರಿಂದ ಪದೇ ಪದೇ ಫಿಸಿಯೊ ಮೈದಾನಕ್ಕೆ ಆಗಮಿಸಿ ನೆರವಾದರು.

ಕೊನೆಗೂ ಪಂತ್ ಅವರ ದಿಟ್ಟ ಹೋರಾಟಕ್ಕೆ ಆಸೀಸ್ ವೇಗಿ ಸ್ಕಾಟ್ ಬೋಲ್ಯಾಂಡ್ ತೆರೆ ಎಳೆದರು. 98 ಎಸೆತಗಳಲ್ಲಿ 40 ರನ್ ಗಳಿಸಿ (1 ಬೌಂಡರಿ) ಔಟ್ ಆಗಿ ನಿರ್ಗಮಿಸಿದರು.

ತಾಜಾ ವರದಿಯ ವೇಳೆಗೆ ಭಾರತ 56.5 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ. ಸ್ಕಾಟ್ ಬೋಲ್ಯಾಂಡ್ 17 ಓವರ್‌ಗಳಲ್ಲಿ 19 ರನ್ ಮಾತ್ರ ಬಿಟ್ಟುಕೊಟ್ಟು ನಾಲ್ಕು ವಿಕೆಟ್‌ಗಳನ್ನು ಕಿತ್ತು ಮಿಂಚಿದ್ದಾರೆ. ಇದರಲ್ಲಿ ಎಂಟು ಮೇಡನ್ ಓವರ್‌ಗಳು ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.