
ಕ್ಯಾನ್‌ಬೆರಾ: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯ ನಾಳೆ (ಬುಧವಾರ) ಆರಂಭವಾಗಲಿದೆ. ಈ ಸರಣಿಯಲ್ಲಿ ಪವರ್‌ಪ್ಲೇ ನಿರ್ಣಾಯಕ ಪಾತ್ರ ವಹಿಸಲಿವೆ ಮತ್ತು ಜಸ್‌ಪ್ರೀತ್ ಬುಮ್ರಾ ಉಪಸ್ಥಿತಿ ನಮ್ಮ ಗೆಲುವಿನ ವಿಶ್ವಾಸ ಹೆಚ್ಚಿಸಿದೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಸರಣಿ ಆರಂಭಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, ‘ಆಸ್ಟ್ರೇಲಿಯಾದ ಆಕ್ರಮಣಕಾರಿ ಬ್ಯಾಟರ್‌ಗಳ ವಿರುದ್ಧ ಬುಮ್ರಾ ಇರುವುದು ನಮ್ಮ ತಂಡದ ಬಲ ಹೆಚ್ಚಿಸಿದೆ’. ಎಂದು ತಿಳಿಸಿದ್ದಾರೆ.
‘ಆಸ್ಟ್ರೇಲಿಯಾದ ನೆಲದಲ್ಲಿ ಆಡುವುದು ಯಾವಾಗಲೂ ಒಂದು ಸವಾಲಾಗಿರುತ್ತದೆ. ಅವರು ಏಕದಿನ ಮತ್ತು ಟಿ20ಐ ವಿಶ್ವಕಪ್‌ನಲ್ಲಿ ಹೇಗೆ ಆಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಪವರ್‌ಪ್ಲೇ ಯಾವಾಗಲೂ ಮುಖ್ಯವಾಗಿರುತ್ತದೆ’ ಎಂದಿದ್ದಾರೆ.
‘ನೀವು ನೋಡಿರುತ್ತೀರ, ಏಷ್ಯಾ ಕಪ್‌ನ ಪವರ್‌ಪ್ಲೇನಲ್ಲಿ ಬುಮ್ರಾ ಕನಿಷ್ಠ ಎರಡು ಓವರ್ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ರೀತಿಯಾದ ಸವಾಲುಗಳನ್ನು ಎದುರಿಸಲು ಅವರು ಯಾವಾಗಲು ಸಿದ್ಧರಿರುವುದು ನಮ್ಮ ತಂಡದ ಶಕ್ತಿಯಾಗಿದೆ. ಹಾಗಾಗಿ ಅವರ ಉಪಸ್ಥಿತಿ ನಮಗೆ ಅನುಕೂಲವಾಗಲಿದೆ’ ಎಂದರು.
‘ಕಳೆದ ಹಲವಾರು ವರ್ಷಗಳಿಂದ ಬುಮ್ರಾ ಬೌಲಿಂಗ್ ಮಾಡುವ ರೀತಿ ಗಮನಿಸಿದರೆ ಅವರು ಉತ್ತಮ ವೇಗಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಮುಖ ಸರಣಿಗೆ ಹೇಗೆ ತಯಾರಿ ನಡೆಸಬೇಕೆಂದು ಅವರಿಗೆ ತಿಳಿದಿದೆ. ಆಸ್ಟ್ರೇಲಿಯಾದಂತ ಪಿಚ್‌ನಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂಬುದು ಅವರಿಗೆ ತಿಳಿದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.