ADVERTISEMENT

IND vs SL T20: ಮೊದಲ ಟ್ವಿ–20 ಪಂದ್ಯದಲ್ಲಿ ಬೆಳಗಿದ ಸೂರ್ಯ: ಭಾರತ ಜಯಭೇರಿ

ಪಿಟಿಐ
Published 25 ಜುಲೈ 2021, 20:03 IST
Last Updated 25 ಜುಲೈ 2021, 20:03 IST
ಟೀಂ ಇಂಡಿಯಾದ ಗೆಲುವಿನ ಸಂಭ್ರಮ (ಚಿತ್ರ: @BCCI)
ಟೀಂ ಇಂಡಿಯಾದ ಗೆಲುವಿನ ಸಂಭ್ರಮ (ಚಿತ್ರ: @BCCI)   

ಕೊಲಂಬೊ: ಸೂರ್ಯಕುಮಾರ್ ಯಾದವ್ (50; 34 ಎಸೆತ, 5 ಬೌಂಡರಿ, 2 ಸಿಕ್ಸರ್‌) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಭುವನೇಶ್ವರ ಕುಮಾರ್ (22ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಶ್ರೀಲಂಕಾ ಎದುರಿನ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 38 ರನ್‌ಗಳಿಂದ ಗೆದ್ದಿತು.

ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಉತ್ತರವಾಗಿ ಶ್ರೀಲಂಕಾ ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ 126 ರನ್‌ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು. ಆತಿಥೇಯ ತಂಡದ ಚರಿತ ಅಸ್ಲಂಕ (44) ಮಾತ್ರ ಹೋರಾಟದ ಮೊತ್ತ ದಾಖಲಿಸಿದರು.

ಇದಕ್ಕೂ ಮೊದಲು ಪ್ರವಾಸಿ ತಂಡದ ನಾಯಕ ಶಿಖರ್ ಧವನ್ (46; 36 ಎ, 4 ಬೌಂ, 1 ಸಿ) ಮತ್ತು ಸಂಜು ಸ್ಯಾಮ್ಸನ್ (27; 20 ಎ, 2 ಬೌಂ, 1 ಸಿ.) ಅರ್ಧಶತಕದ ಜೊತೆಯಾಟದ ಮೂಲಕ ಇನಿಂಗ್ಸ್‌ ಕಟ್ಟಿದರು. ಸಂಜು ಔಟಾದ ನಂತರ ಶಿಖರ್‌ ಜೊತೆಗೆ ಸೂರ್ಯಕುಮಾರ್ ಸೊಗಸಾದ ಇನಿಂಗ್ಸ್ ಕಟ್ಟಿದರು.

ADVERTISEMENT

ಸಂಕ್ಷಿಪ್ತ ಸ್ಕೋರು:

ಭಾರತ: 20 ಓವರ್‌ಗಳಲ್ಲಿ 5ಕ್ಕೆ 164 (ಶಿಖರ್ ಧವನ್ 46, ಸಂಜು ಸ್ಯಾಮ್ಸನ್‌ 27, ಸೂರ್ಯಕುಮಾರ್ ಯಾದವ್ 50; ದುಷ್ಮಂತ ಚಮೀರ 24ಕ್ಕೆ2, ಚಮಿಕ ಕರುಣರತ್ನೆ 34ಕ್ಕೆ1, ವನಿಂದು ಹಸರಂಗ 28ಕ್ಕೆ2).

ಶ್ರೀಲಂಕಾ: 18.3 ಓವರ್‌ಗಳಲ್ಲಿ 126 (ಚರಿತ ಅಸ್ಲಂಕ 44, ಆವಿಷ್ಕ ಫರ್ನಾಂಡೊ 26; ಭುವನೇಶ್ವರ ಕುಮಾರ್‌ 22ಕ್ಕೆ 4, ದೀಪಕ್ ಚಾಹರ್ 24ಕ್ಕೆ 2). ಫಲಿತಾಂಶ: ಭಾರತ ತಂಡಕ್ಕೆ38 ರನ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.