ADVERTISEMENT

ಇಂಡಿಯಾ ಎ ತಂಡ ಪ್ರಕಟ: ವಿಶ್ರಾಂತಿ ಕೇಳಿದ ಬೆನ್ನಲ್ಲೆ ಅಯ್ಯರ್‌ಗೆ ನಾಯಕತ್ವದ ಹೊಣೆ

ಪಿಟಿಐ
Published 25 ಸೆಪ್ಟೆಂಬರ್ 2025, 6:47 IST
Last Updated 25 ಸೆಪ್ಟೆಂಬರ್ 2025, 6:47 IST
<div class="paragraphs"><p>ಶ್ರೇಯಸ್‌ ಅಯ್ಯರ್</p></div>

ಶ್ರೇಯಸ್‌ ಅಯ್ಯರ್

   

ನವದೆಹಲಿ: ಶ್ರೇಯಸ್‌ ಅಯ್ಯರ್ ಅವರನ್ನು ಆಸ್ಟ್ರೇಲಿಯಾ ಎ ವಿರುದ್ಧ ಆಡಲಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಭಾರತ ‘ಎ’ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. 

ಬೆನ್ನುನೋವಿನ ಕಾರಣ ದೀರ್ಘ ಮಾದರಿಯಿಂದ (ರೆಡ್‌ಬಾಲ್‌ ಕ್ರಿಕೆಟ್‌ನಿಂದ) ತಮಗೆ ಆರು ತಿಂಗಳ ಬಿಡುವು ನೀಡುವಂತೆ ಎರಡು ದಿನಗಳ ಹಿಂದೆ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್‌ ಅಗರಕರ್ ಅವರಿಗೆ ಮನವಿ ಮಾಡಿದ್ದರು.

ADVERTISEMENT

ಕಾನ್ಪುರದಲ್ಲಿ ಸೆ. 30ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ.

ಏಷ್ಯಾ ಕಪ್‌ ತಂಡದಲ್ಲಿ ಆಡುತ್ತಿರುವ ಸ್ಟಾರ್‌ ಬ್ಯಾಟರ್ ಅಭಿಷೇಕ್‌ ವರ್ಮಾ, ತಿಲಕ್‌ ವರ್ಮಾ, ವೇಗಿ ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಅವರು ಎರಡನೇ ಪಂದ್ಯ (ಅ.3) ಮತ್ತು ಮೂರನೇ (ಅ. 5) ಪಂದ್ಯಗಳ ವೇಳೆ ತಂಡ ಸೇರಿಕೊಳ್ಳಲಿದ್ದಾರೆ.

ತಂಡ ಹೀಗಿದೆ: ಮೊದಲ ಪಂದ್ಯಕ್ಕೆ ತಂಡ: ಶ್ರೇಯಸ್‌ ಅಯ್ಯರ್‌ (ನಾಯಕ), ಪ್ರಭಸಿಮ್ರನ್ ಸಿಂಗ್‌ (ವಿಕೆಟ್‌ ಕೀಪರ್), ರಿಯಾನ್ ಪರಾಗ್, ಆಯುಷ್‌ ಬಡೋನಿ, ಸೂರ್ಯಾಂಶ್‌ ಶೆಡ್ಗೆ, ವಿಪ್ರಜ್ ನಿಗಮ್, ನಿಶಾಂತ್ ಸಿಂಧು, ಗುರಜಪನೀತ್‌ ಸಿಂಗ್, ಯುದ್ಧವೀರ್ ಸಿಂಗ್, ರವಿ ಬಿಷ್ಣೋಯಿ, ಅಭಿಷೇಕ್ ಪೊರೆಲ್‌ (ವಿಕೆಟ್ ಕೀಪರ್), ಪ್ರಿಯಾಂಶ್‌ ಆರ್ಯ, ಸಿಮರ್ಜೀತ್ ಸಿಂಗ್‌

ಪಾಟೀದಾರ್ ನಾಯಕ: 32 ವರ್ಷ ವಯಸ್ಸಿನ ಬ್ಯಾಟರ್ ರಜತ್‌ ಪಾಟೀದಾರ್‌ ಅವರು ನಾಗ್ಪುರದಲ್ಲಿ ಅಕ್ಟೋಬರ್‌ 1 ರಿಂದ 4ರವರೆಗೆ ನಡೆಯಲಿರುವ ಇರಾನಿ ಟ್ರೋಫಿ ಪಂದ್ಯದಲ್ಲಿ ವಿದರ್ಭ ತಂಡದ ಎದುರು ಆಡಲಿರುವ ಭಾರತ ಇತರರ ತಂಡದ ನಾಯಕತ್ವವನ್ನು ವಹಿಸಲಿದ್ದಾರೆ.

ದುಲೀಪ್ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದ ಕೇಂದ್ರ ವಲಯ ತಂಡಕ್ಕೂ ಅವರು ನಾಯಕರಾಗಿದ್ದರು.

ತಂಡ: ರಜತ್ ಪಾಟಿದಾರ್ (ನಾಯಕ), ಅಭಿಮನ್ಯು ಈಶ್ವರನ್, ಆರ್ಯನ್ ಜುಯಲ್‌ (ವಿಕೆಟ್‌ ಕೀಪರ್‌), ಋತುರಾಜ್ ಗಾಯಕವಾಡ್‌, ಯಶ್‌ ಧುಳ್, ಶೇಖ್ ರಶೀದ್‌, ಇಶಾನ್ ಕಿಶನ್ (ವಿಕೆಟ್ ಕೀಪರ್), ತನುಷ್‌ ಕೋಟ್ಯಾನ್‌, ಮಾನವ್ ಸುತಾರ್‌, ಗುರ್ನೂರ್‌ ಬ್ರಾರ್‌, ಖಲೀಲ್‌ ಅಹ್ಮದ್, ಆಕಾಶ್ ದೀಪ್, ಅನ್ಶುಲ್ ಕಾಂಬೋಜ್, ಸಾರಾನ್ಶ್‌ ಜೈನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.