ADVERTISEMENT

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯ: ಭಾರತ ‘ಎ’ ತಂಡಕ್ಕೆ ಶಫಾಲಿ ಆಸರೆ

ಪಿಟಿಐ
Published 21 ಆಗಸ್ಟ್ 2025, 16:04 IST
Last Updated 21 ಆಗಸ್ಟ್ 2025, 16:04 IST
ಶಫಾಲಿ ವರ್ಮಾ
ಶಫಾಲಿ ವರ್ಮಾ   

ಬ್ರಿಸ್ಬೇನ್: ಭಾರತ ಮಹಿಳಾ ‘ಎ’ ತಂಡವು ಮಳೆಯಿಂದ ಅಡಚಣೆಯಾದ ‘ಟೆಸ್ಟ್‌’ ಪಂದ್ಯದಲ್ಲಿ ಆಸ್ಟ್ರೇಲಿಯಾ ‘ಎ’ ವಿರುದ್ಧ ಮೊದಲ ದಿನ 5 ವಿಕೆಟ್‌ಗೆ 93 ರನ್‌ ಗಳಿಸಿ ಸಂಕಷ್ಟದಲ್ಲಿದೆ.

ಗುರುವಾರ ಟಾಸ್‌ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಏಕದಿನ ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದ ಶಫಾಲಿ ವರ್ಮಾ (35; 38ಎ, 4x8) ಅವರು ಭಾರತದ ಪರ ಕೊಂಚ ಪ್ರತಿರೋಧ ತೋರಿದರು. ಅಗ್ರ ಬ್ಯಾಟರ್‌ಗಳಾದ ನಂದಿನಿ ಕಶ್ಯಪ್ ಮತ್ತು ಧಾರಾ ಗುಜ್ಜರ್ ಅವರು ಖಾತೆ ತೆರೆಯುವ ಮುನ್ನ ಪೆವಿಲಿಯನ್‌ ಸೇರಿದರು. 

ಆರು ರನ್‌ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ ಕಳೆದುಕೊಂಡ ತಂಡಕ್ಕೆ ಶಫಾಲಿ ಮತ್ತು ರಾಘ್ವಿ ಬಿಸ್ಟ್ (ಔಟಾಗದೇ 26; 44ಎ, 4x5) ಚೇತರಿಕೆ ನೀಡಿದರು. ಆತಿಥೇಯ ತಂಡದ ಜಾರ್ಜಿಯಾ ಪ್ರೆಸ್ಟ್‌ವಿಡ್ಜ್ ಮೂರು ವಿಕೆಟ್‌ ಪಡೆದು ಮಿಂಚಿದರು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಭಾರತ ಎ: 23.2 ಓವರ್‌ಗಳಲ್ಲಿ 5 ವಿಕೆಟ್‌ಗೆ 93 (ಶಫಾಲಿ ವರ್ಮಾ 35, ರಾಘ್ವಿ ಬಿಸ್ಟ್‌ ಔಟಾಗದೇ 26; ಜಾರ್ಜಿಯಾ ಪ್ರೆಸ್ಟ್‌ವಿಡ್ಜ್ 25ಕ್ಕೆ 3). ಆಸ್ಟ್ರೇಲಿಯಾ ಎ ಎದುರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.