ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಕ್ವಾಲಾಲಂಪುರ: ವೆಸ್ಟ್ ಇಂಡೀಸ್ ತಂಡವನ್ನು ಕೇವಲ 44 ರನ್‌ಗಳಿಗೆ ಉರುಳಿಸಿದ ಭಾರತ ತಂಡ, 19 ವರ್ಷದೊಳಗಿನ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಭಾನುವಾರ 9 ವಿಕೆಟ್‌ಗಳ ನಿರಾಯಾಸ ಗೆಲುವಿನೊಡನೆ ಅಭಿಯಾನ ಆರಂಭಿಸಿತು.
ಪರುಣಿಕಾ ಸಿಸೋಸಿಯಾ 7ಕ್ಕೆ3 ವಿಕೆಟ್ ಪಡೆದರೆ, ಆಯುಷಿ ಮತ್ತು ಜೋಶಿತಾ ತಲಾ ಎರಡು ವಿಕೆಟ್ ಪಡೆದರು. ವೆಸ್ಟ್ ಇಂಡೀಸ್‌ಗ ಮೂವರು ರನೌಟ್ ಆದರು. ನಾಯಕಿ ಕೆನಿಕಾ (15) ಮತ್ತು ಅಸಬಿ ಕ್ಯಾಲೆಂಡರ್ (12) ಅವರನ್ನು ಬಿಟ್ಟರೆ ಉಳಿದವರು ಐದು ರನ್ ಸಹ ದಾಟಲಿಲ್ಲ. ಬಯುಮಾಸ್ ಓವಲ್‌ನಲ್ಲಿ ಭಾರತ 4.2 ಓವರುಗಳಲ್ಲಿ 1 ವಿಕೆಟ್‌ಗೆ 47 ರನ್ ಹೊಡೆಯಿತು.
ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 13.2 ಓವರುಗಳಲ್ಲಿ 44 (ಕೆನಿಕಾ ಕಾಸ್ಸರ್ 15; ಪರುನಿಕಾ ಸಿಸೋಡಿಯಾ 7ಕ್ಕೆ3, ಆಯುಷಿ ಶುಕ್ಲಾ 6ಕ್ಕೆ2, ವಿ.ಜೆ.ಜೋಶಿತಾ 6ಕ್ಕೆ2); ಭಾರತ: 4.2 ಓವರುಗಳಲ್ಲಿ 1 ವಿಕೆಟ್‌ಗೆ 47 (ಸನಿಕಾ ಚಾಲ್ಕೆ ಔಟಾಗದೇ 18, ಜಿ.ಕಮಲಿನಿ ಔಟಾಗದೇ 16, ಜಹಜರಾ ಕ್ಲಾಕ್ಸ್‌ಟನ್ 18ಕ್ಕೆ1).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.