ADVERTISEMENT

ದಕ್ಷಿಣ ಆಫ್ರಿಕಾ ಸವಾಲು ಗೆದ್ದ ಭಾರತ ಕ್ರಿಕೆಟ್ ತಂಡದ ಮುಂದಿನ ಸರಣಿ ಯಾವಾಗ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2025, 12:56 IST
Last Updated 22 ಡಿಸೆಂಬರ್ 2025, 12:56 IST
<div class="paragraphs"><p>ಅಭ್ಯಾಸ ನಿರತ ಭಾರತ ಕ್ರಿಕೆಟ್ ತಂಡ&nbsp;</p></div>

ಅಭ್ಯಾಸ ನಿರತ ಭಾರತ ಕ್ರಿಕೆಟ್ ತಂಡ 

   

ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯನ್ನು ಭಾರತ ಪುರುಷರ ಕ್ರಿಕೆಟ್ ತಂಡ ಕ್ರಮವಾಗಿ 2–1 ಹಾಗೂ 3–1ರ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ನಡುವೆ ಕ್ರಿಕೆಟ್ ಅಭಿಮಾನಿಗಳು, ಭಾರತ ತಂಡದ ಮುಂದಿನ ಪಂದ್ಯ ಯಾವಾಗ? ಯಾವ ತಂಡದ ವಿರುದ್ಧ ಆಡಲಿದೆ ಎಂಬುದನ್ನು ಹುಡುಕಲು ಪ್ರಾರಂಭಿಸಿದ್ದಾರೆ.

ಶನಿವಾರ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಪುರುಷರ ಕ್ರಿಕೆಟ್‌ ತಂಡ 2025ರಲ್ಲಿ ತನ್ನ ಎಲ್ಲಾ ಪಂದ್ಯಾವಳಿಗಳನ್ನು ಮುಕ್ತಾಯಗೊಳಿಸಿದೆ. ತನ್ನ ಮುಂದಿನ ಪಂದ್ಯವನ್ನು ನ್ಯೂಜಿಲೆಂಡ್ ತಂಡದ ವಿರುದ್ಧ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಆಡಲಿದೆ.

ADVERTISEMENT

ಮೂರು ಏಕದಿ ಪಂದ್ಯಗಳು

ಜನವರಿ 11ರಿಂದ ವಡೋದರದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಏಕದಿನ ಸರಣಿ ಆರಂಭವಾಗಲಿದೆ. ಎರಡನೇ ಪಂದ್ಯ ಜನವರಿ 14ರಂದು ರಾಜಕೋಟ್‌ನಲ್ಲಿ ಹಾಗೂ ಅಂತಿಮ ಪಂದ್ಯ ಜನವರಿ 18ರಂದು ಇಂದೋರ್‌ನಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಕೂಡ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿವೆ.

ಮೊದಲ ಏಕದಿನ ಪಂದ್ಯ–ಜನವರಿ 1, ವಡೋದರ

ಎರಡನೇ ಏಕದಿನ ಪಂದ್ಯ–ಜನವರಿ 15, ರಾಜ್‌ಕೋಟ್

ಅಂತಿಮ ಏಕದಿನ ಪಂದ್ಯ – ಜನವರಿ 18, ಇಂದೋರ್

ಎಲ್ಲಾ ಪಂದ್ಯಗಳು ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿವೆ

5 ಪಂದ್ಯಗಳ ಟಿ20 ಸರಣಿ

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಟಿ20 ಸರಣಿ ಟೀಂ ಇಂಡಿಯಾಗೆ ಬಹಳ ಮಹತ್ವದ್ದಾಗಿದೆ. ಚುಟುಕು ಸರಣಿಯ ಮೊದಲ ಪಂದ್ಯ 2026ರ ಜನವರಿ 21ರಂದು ನಾಗಪುರದಲ್ಲಿ ಆರಂಭವಾಗಲಿದೆ. 2ನೇ ಪಂದ್ಯ ಜನವರಿ 23ರಂದು ರಾಜ್‌ಪುರದಲ್ಲಿ ನಡೆಯಲಿದೆ.

ಮೂರನೇ ಪಂದ್ಯ ಜನವರಿ 25ರಂದು ಗುವಾಹಟಿ, ನಾಲ್ಕನೇ ಪಂದ್ಯ 28ರಂದು ವಿಶಾಖಪಟ್ಟಣದಲ್ಲಿ ಹಾಗೂ ಅಂತಿಮ ಪಂದ್ಯ ಜನವರಿ 31ರಂದು ತಿರುವನಂತಪುರದಲ್ಲಿ ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಆರಂಭವಾಗಲಿವೆ.

ಮೊದಲ ಟಿ20 ಪಂದ್ಯ– ಜನವರಿ 21, ನಾಗಪುರ

ಎರಡನೇ ಟಿ20 ಪಂದ್ಯ–ಜನವರಿ 23, ರಾಜ್‌ಪುರ

ಮೂರನೇ ಟಿ20 ಪಂದ್ಯ– ಜನವರಿ 25, ಗುವಾಹಟಿ

ನಾಲ್ಕನೇ ಟಿ20 ಪಂದ್ಯ–ಜನವರಿ 28, ವಿಶಾಖಪಟ್ಟಣ

ಅಂತಿಮ ಟಿ20 ಪಂದ್ಯ– ಜನವರಿ 31, ತಿರುವನಂತಪುರ

ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ಆರಂಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.