ADVERTISEMENT

Ind VS Eng|ಐದನೇ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ ಸೇರಿಕೊಂಡ ಜೇಮಿ ಓವರ್ಟನ್

ಪಿಟಿಐ
Published 28 ಜುಲೈ 2025, 10:07 IST
Last Updated 28 ಜುಲೈ 2025, 10:07 IST
   

ಲಂಡನ್‌: ಇಂಗ್ಲೆಂಡ್ ತಂಡವು ವೇಗದ ಬೌಲಿಂಗ್ ಆಲ್‌ರೌಂಡರ್‌ ಜೇಮಿ ಓವರ್ಟನ್‌ ಅವರನ್ನು ಇದೇ 31ರಂದು ಓವಲ್‌ನಲ್ಲಿ ಆರಂಭವಾಗುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಸೇರ್ಪಡೆ ಮಾಡಿಕೊಂಡಿದೆ. 15 ಮಂದಿಯ ತಂಡವನ್ನು ಸೋಮವಾರ ಪ್ರಕಟಿಸಿದೆ.

ಓವರ್ಟನ್‌ ಈ ಹಿಂದೆ 2022ರಲ್ಲಿ ತಮ್ಮ ಏಕೈಕ ಟೆಸ್ಟ್‌ ಪಂದ್ಯವನ್ನು 2022ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಆಡಿಡದ್ದರು. ಆ ಪಂದ್ಯದಲ್ಲಿ ಎರಡು ವಿಕೆಟ್‌ ಹಾಗೂ 97 ರನ್ ಗಳಿಸಿದ್ದರು. ಅಂತಿಮ 11ರ ತಂಡದಲ್ಲಿ ಸ್ಥಾನ ಗಿಟ್ಟಿಸಲು ಅವರು ಗಸ್‌ ಅಟ್ಕಿನ್ಸನ್ ಮತ್ತು ಜೋಶ್‌ ಟಂಗ್ ಜೊತೆ ಪೈಪೋಟಿಯಲ್ಲಿದ್ದಾರೆ.

ಮೊದಲ ಎರಡು ಟೆಸ್ಟ್‌ಗಳಲ್ಲಿ ಆಡಿದ್ದ ಟಂಗ್ 11 ವಿಕೆಟ್‌ ಪಡೆದಿದ್ದರೂ ದುಬಾರಿಯಾಗಿದ್ದರು. ಅಟ್ಕಿನ್ಸನ್‌ ಮೇ ನಂತರ ಯಾವುದೇ ಪ್ರಥಮ ದರ್ಜೆ ಪಂದ್ಯ ಆಡಿಲ್ಲ.

ADVERTISEMENT

ಇಂಗ್ಲೆಂಡ್‌ ತಂಡ ಹೊಸ ವೇಗಿಯನ್ನು ಸೇರ್ಪಡೆ ಮಾಡಿಕೊಳ್ಳುವ ನಿರೀಕ್ಷೆಯಿದೆ. ವೋಕ್ಸ್‌ ಮತ್ತು ಬ್ರೈಡನ್ ಕಾರ್ಸ್‌ ಎಲ್ಲ ಐದೂ ಪಂದ್ಯಗಳನ್ನು ಆಡಿದ್ದಾರೆ. ಜೋಫ್ರಾ ಆರ್ಚರ್‌ ಮೂರು ಮತ್ತು ನಾಲ್ಕನೇ ಟೆಸ್ಟ್‌ ಆಡಿದ್ದಾರೆ. 

ಇಂಗ್ಲೆಂಡ್ ತಂಡ: ಬೆನ್‌ ಸ್ಟೋಕ್ಸ್‌ (ನಾಯಕ), ಜೋಫ್ರಾ ಆರ್ಚರ್‌, ಗಸ್‌ ಅಟ್ಕಿನ್ಸನ್‌, ಜೇಕಬ್‌ ಬೆಥೆಲ್‌, ಹ್ಯಾರಿ ಬ್ರೂಕ್‌, ಬ್ರೈಡನ್ ಕಾರ್ಸ್, ಜಾಕ್‌ ಕ್ರಾಲಿ, ಲಿಯಾಮ್ ಡಾಸನ್‌, ಬೆನ್‌ ಡಕೆಟ್‌, ಜೇಮಿ ಓವರ್ಟನ್‌, ಓಲಿ ಪೋಪ್‌, ಜೋ ರೂಟ್‌, ಜೇಮಿ ಸ್ಮಿತ್‌, ಜೋಶ್‌ ಟಂಗ್‌, ಕ್ರಿಸ್‌ ವೋಕ್ಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.