ADVERTISEMENT

AUS vs IND | ಟಾಸ್ ಗೆದ್ದ ಆಸಿಸ್: ರೋಹಿತ್, ವಿರಾಟ್ ವೈಫಲ್ಯ; ಭಾರತಕ್ಕೆ ಆಘಾತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2025, 4:20 IST
Last Updated 19 ಅಕ್ಟೋಬರ್ 2025, 4:20 IST
<div class="paragraphs"><p>ರೋಹಿತ್‌ ಶರ್ಮಾ ಹಾಗೂ&nbsp;ವಿರಾಟ್‌ ಕೊಹ್ಲಿ</p></div>

ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ

   

ಕೃಪೆ: ಪಿಟಿಐ (ಸಂಗ್ರಹ ಚಿತ್ರ)

ಪರ್ತ್‌: ಭಾರತ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಆತಿಥೇಯ ಆಸ್ಟ್ರೇಲಿಯಾ ಬೌಲಿಂಗ್‌ ಆಯ್ದುಕೊಂಡಿದೆ.

ADVERTISEMENT

ಪಂದ್ಯವು ಪರ್ತ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿದೆ.

ಇನಿಂಗ್ಸ್‌ ಆರಂಬಿಸಿದ ನಾಯಕ ಶುಭಮನ್‌ ಗಿಲ್‌, 'ಹಿಟ್ ಮ್ಯಾನ್‌' ರೋಹಿತ್‌ ಶರ್ಮಾ ಹಾಗೂ 'ರನ್‌ ಮಷಿನ್‌' ವಿರಾಟ್‌ ಕೊಹ್ಲಿ ವೈಫಲ್ಯ ಅನುಭವಿಸಿದ್ದಾರೆ.

ಟೆಸ್ಟ್ ಹಾಗೂ ಟಿ20 ಮಾದರಿಗೆ ಈಗಾಗಲೇ ವಿದಾಯ ಹೇಳಿರುವ ರೋಹಿತ್‌, ವಿರಾಟ್‌, ಬರೋಬ್ಬರಿ 7 ತಿಂಗಳ ಬಳಿಕ ಟೀಂ ಇಂಡಿಯಾಗೆ ಮರಳಿದ್ದಾರೆ. ರೋಹಿತ್‌ 8 ರನ್‌ ಗಳಿಸಿದರೆ, ಕೊಹ್ಲಿ ಸೊನ್ನೆ ಸುತ್ತಿದರು.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಯೋಜನೆಯಲ್ಲಿರುವ ಈ ಇಬ್ಬರಿಗೆ ಈ ಟೂರ್ನಿ ನಿರ್ಣಾಯಕವಾಗಲಿದೆ.

ನಾಯಕನಾಗಿ ಮೊದಲ ಏಕದಿನ ಸರಣಿ ಆಡುತ್ತಿರುವ ಗಿಲ್‌ ಆಟ 10 ರನ್‌ ಗಳಿಗೆ ಕೊನೆಯಾಗಿದೆ.

ವೇಗಿಗಳಾದ ಮಿಚೇಲ್‌ ಸ್ಟಾರ್ಕ್‌, ಜೋಶ್‌ ಹ್ಯಾಜಲ್‌ವುಡ್‌ ಮತ್ತು ನೇಥನ್‌ ಎಲಿಸ್‌ ಒಂದೊಂದು ವಿಕೆಟ್‌ ಉರುಳಿಸಿದ್ದಾರೆ.

ಮಳೆ ಅಡಚಣೆ

ಮಳೆಯಿಂದಾಗಿ ಆಟ ನಿಂತಿದೆ. ಸದ್ಯ 8.5 ಓವರ್‌ಗಳು ಮುಕ್ತಾಯವಾಗಿದ್ದು ಭಾರತದ ಮೊತ್ತ 3 ವಿಕೆಟ್‌ಗೆ 25 ರನ್‌ ಆಗಿದೆ.

ಉಪನಾಯಕ ಶ್ರೇಯಸ್‌ ಅಯ್ಯರ್‌ (2) ಹಾಗೂ ಇನ್ನೂ ಖಾತೆ ತೆರೆಯದ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಕ್ರೀಸ್‌ನಲ್ಲಿದ್ದಾರೆ.

ಹನ್ನೊಂದರ ಬಳಗ

ಆಂಧ್ರ ಪ್ರದೇಶದ ಆಲ್‌ರೌಂಡರ್ ನಿತೀಶ್‌ ಕುಮಾರ್‌ ರೆಡ್ಡಿ ಈ ಪಂದ್ಯದ ಮೂಲಕ ಭಾರತದ ಪರ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದಾರೆ.

ಭಾರತ ತಂಡ: ರೋಹಿತ್‌ ಶರ್ಮಾ, ಶುಭಮನ್‌ ಗಿಲ್ (ನಾಯಕ), ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌ (ವಿಕೆಟ್‌ ಕೀಪರ್‌), ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌, ನಿತೀಶ್‌ ಕುಮಾರ್‌ ರೆಡ್ಡಿ, ಹರ್ಷಿತ್‌ ರಾಣ, ಮೊಹಮ್ಮದ್‌ ಸಿರಾಜ್‌, ಅರ್ಷದೀಪ್‌ ಸಿಂಗ್‌

ಆಸ್ಟ್ರೇಲಯಾ ತಂಡ: ಟ್ರಾವಿಸ್ ಹೆಡ್‌, ಮಿಚೇಲ್‌ ಮಾರ್ಷ್‌ (ನಾಯಕ), ಮ್ಯಾಥ್ಯೂ ಶಾರ್ಟ್‌, ಜೋಶ್‌ ಫಿಲಿಪ್‌ (ವಿಕೆಟ್‌ ಕೀಪರ್‌), ಮ್ಯಾಟ್‌ ರೆನ್ಶಾ, ಕೂಪರ್‌ ಕನೊಲಿ, ಮಿಚೇಲ್‌ ಓವನ್‌, ಮಿಚೇಲ್‌ ಸ್ಟಾರ್ಕ್‌, ನೇಥನ್‌ ಎಲಿಸ್‌, ಮ್ಯಾಥ್ಯೂ ಕುನೇಮನ್‌, ಜೋಶ್‌ ಹ್ಯಾಜಲ್‌ವುಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.