ಡಬ್ಲಿನ್: ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಪೇರಿಸಿದೆ.
ಭಾರತ ವಿರುದ್ಧ ಟಾಸ್ ಗೆದ್ದ ಐರ್ಲೆಂಡ್, ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿದೆ.
ಭಾರತದ ಪರ ಋತುರಾಜ್ ಗಾಯಕವಾಡ 58, ಸಂಜು ಸ್ಯಾಮ್ಸನ್ 40, ರಿಂಕು ಸಿಂಗ್ 38, ಶಿವಂ ದುಬೆ 22, ಯಶಸ್ವಿ ಜೈಸ್ವಾಲ್ 18 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಐರ್ಲೆಂಡ್ ಪರ ಬ್ಯಾರಿ ಮೆಕಾರ್ಥಿ 2, ಮಾರ್ಕ್ ಅಡೇರ್, ಕ್ರೇಗ್ ಯಂಗ್, ಬೆಂಜಮಿನ್ ವೈಟ್ ತಲಾ ಒಂದೊಂದು ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.