ADVERTISEMENT

IND v NZ T20: ಭಾರತದ ಸಾಂಘಿಕ ದಾಳಿಗೆ ಕಿವೀಸ್ ತತ್ತರ; ಗೆಲುವಿಗೆ 100 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜನವರಿ 2023, 15:35 IST
Last Updated 29 ಜನವರಿ 2023, 15:35 IST
ಟೀಮ್ ಇಂಡಿಯಾ ಆಟಗಾರರು (ಬಿಸಿಸಿಐ ಟ್ವಿಟರ್ ಚಿತ್ರ)
ಟೀಮ್ ಇಂಡಿಯಾ ಆಟಗಾರರು (ಬಿಸಿಸಿಐ ಟ್ವಿಟರ್ ಚಿತ್ರ)   

ಲಖನೌ: ಭಾರತ ವಿರುದ್ಧದ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಸಾಧಾರಣ ಮೊತ್ತ ಪೇರಿಸಿದೆ.

ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿದೆ.

ಮಿಚೆಲ್ ಸ್ಯಾಂಟನರ್ ಔಟಾಗದೆ 19, ಫಿನ್ ಅಲೆನ್ 11, ಡೆವೊನ್ ಕಾನ್ವೆ 11, ಮಾರ್ಕ್ ಚಾಪ್ಮನ್ 14, ಮೈಕಲ್ ಬ್ರೇಸ್‌ವೆಲ್ 14, ಡೆರಿಲ್ ಮಿಚೆಲ್ 8, ಗ್ಲೆನ್ ಫಿಲಿಪ್ಸ್ 05 ರನ್ ಗಳಿಸಿದರು.

ನ್ಯೂಜಿಲೆಂಡ್‌ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಮೂಲಕ ಟೀಮ್ ಇಂಡಿಯಾ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ.

ADVERTISEMENT

ಭಾರತದ ಪರ ಆರ್ಷದೀಪ್ ಸಿಂಗ್ 2, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ದೀಪಕ್ ಹೂಡಾ, ಕುಲದೀಪ್ ಯಾದವ್ ತಲಾ ವಿಕೆಟ್ ಪಡೆದರು.

ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ಈಗ 1–0ಯ ಮುನ್ನಡೆಯಲ್ಲಿದೆ. ರಾಂಚಿಯಲ್ಲಿ ಶುಕ್ರವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಆತಿಥೇಯ ತಂಡವು 21 ರನ್‌ಗಳಿಂದ ಸೋತಿತ್ತು.

ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಚುಟುಕು ಕ್ರಿಕೆಟ್ ಸರಣಿ ಜಯಿಸುವ ಗುರಿ ಈಡೇರಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.