ADVERTISEMENT

ವಿಡಿಯೊ ನೋಡಿ: ಬಾಬರ್ ಅಜಮ್ ಔಟ್‌ ಮಾಡಿ ಸಂಭ್ರಮಿಸಿದ ಹಾರ್ದಿಕ್‌ ಪಾಂಡ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2025, 12:23 IST
Last Updated 23 ಫೆಬ್ರುವರಿ 2025, 12:23 IST
<div class="paragraphs"><p>ಹಾರ್ದಿಕ್‌ ಪಾಂಡ್ಯ</p></div>

ಹಾರ್ದಿಕ್‌ ಪಾಂಡ್ಯ

   

ದುಬೈ: ದುಬೈನಲ್ಲಿ ನಡೆಯುತ್ತಿರುವ ಭಾರತ–ಪಾಕಿಸ್ತಾನ ಚಾಂಪಿಯನ್‌ ಟ್ರೋಫಿಯಲ್ಲಿ ಪಾಕ್‌ ಆಟಗಾರ ಬಾಬರ್ ಅಜಮ್ ಔಟ್‌ ಅನ್ನು ಭಾರತದ ಆಟಗಾರ ಹಾರ್ದಿಕ್‌ ಪಾಂಡ್ಯ ಸಂಭ್ರಮಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಔಟಾಗುವುದಕ್ಕೂ ಮೊದಲು ಬಾಬರ್‌ ನಾಲ್ಕು ಬೌಂಡರಿಗಳನ್ನು ಸಿಡಿಸಿದ್ದರು. 9ನೇ ಓವರ್‌ನಲ್ಲಿ ಹಾರ್ದಿಕ್ ಬೌಲಿಂಗ್ ಮಾಡುತ್ತಿದ್ದ ವೇಳೆ ಬಾಬರ್‌ ಎಸೆತವನ್ನು ವಿಕೆಟ್‌ ಕೀಪರ್‌ ಕೆ.ಎಲ್‌ ರಾಹುಲ್‌ ಸುಲಭವಾಗಿ ಕ್ಯಾಚ್‌ ಹಿಡಿದಿದ್ದಾರೆ. ಬಾಬರ್ ಔಟ್ ಆಗುತ್ತಿದ್ದಂತೆ ಕ್ರೀಡಾಂಗಣದಲ್ಲಿ ಓಡಿದ ಹಾರ್ದಿಕ್‌ ‘ಬಾಯ್‌, ಬಾಯ್‌’ ಎನ್ನುವಂತೆ ಕೈ ಸನ್ನೆ ಮಾಡಿದ್ದಾರೆ,

ADVERTISEMENT

ಭಾರತದ ವಿರುದ್ಧ ಟಾಸ್‌ ಗೆದ್ದು ಪಾಕಿಸ್ತಾನ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.