ADVERTISEMENT

IND vs SA ODI | ಮಿಲ್ಲರ್‌-ಕ್ಲಾಸನ್ ಶತಕದ ಜೊತೆಯಾಟ; ಭಾರತಕ್ಕೆ ಸವಾಲಿನ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2022, 13:55 IST
Last Updated 6 ಅಕ್ಟೋಬರ್ 2022, 13:55 IST
ಹೆನ್ರಿಚ್‌ ಕ್ಲಾಸನ್‌ ಹಾಗೂ ಡೇವಿಡ್‌ ಮಿಲ್ಲರ್‌ (ಚಿತ್ರಕೃಪೆ: @ProteasMenCSA / Twitter)
ಹೆನ್ರಿಚ್‌ ಕ್ಲಾಸನ್‌ ಹಾಗೂ ಡೇವಿಡ್‌ ಮಿಲ್ಲರ್‌ (ಚಿತ್ರಕೃಪೆ: @ProteasMenCSA / Twitter)   

ಲಖನೌ: ಆತಿಥೇಯ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನಿಗದಿತ 40 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 249 ರನ್ ಗಳಿಸಿದೆ.

ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಎಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡದ ನಾಯಕ ಶಿಖರ್‌ ಧವನ್‌ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಪ್ರವಾಸಿ ಪಡೆಗೆ ಜೇನ್ಮೆನ್ ಮಲಾನ್ ಹಾಗೂಕ್ವಿಂಟನ್ ಡಿಕಾಕ್ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 49 ರನ್ ಕೂಡಿಸಿದರು.‌

ಮಲಾನ್ (22) ಔಟಾದ ಬಳಿಕ ಬಂದ ನಾಯಕತೆಂಬಾ ಬವುಮಾ (8) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.ಏಡನ್ ಮರ್ಕರಂ (0) ಸಹ ನಿರಾಶೆ ಮೂಡಿಸಿದರು.

ADVERTISEMENT

ಈ ಹಂತದಲ್ಲಿ ಕ್ವಿಂಟನ್‌ಗೆ (48) ಜೊತೆಯಾದ ಹೆನ್ರಿಚ್‌ ಕ್ಲಾಸನ್‌ ವಿಕೆಟ್‌ ಬೀಳದಂತೆ ಎಚ್ಚರಿಕೆಯ ಆಟವಾಡಿದರು.

ಕ್ವಿಂಟನ್‌ ವಿಕೆಟ್‌ ಪತನದ ನಂತರ ಬಂದಡೇವಿಡ್‌ ಮಿಲ್ಲರ್‌ ಆಫ್ರಿಕಾ ಇನಿಂಗ್ಸ್‌ಗೆ ಬಲ ತುಂಬಿದರು. ಕ್ಲಾಸನ್‌ ಜೊತೆಗೂಡಿ ಮುರಿಯದಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ 139 ರನ್‌ ಸೇರಿದರು.

ಕ್ಲಾಸನ್‌ 65 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 6 ಬೌಂಡರಿ ಸಹಿತ 74 ರನ್ ಗಳಿಸಿದರೆ, ಮಿಲ್ಲರ್‌ 63 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 5 ಬೌಂಡರಿ ಸಹಿತ 75 ರನ್ ಸಿಡಿಸಿದರು. ಹೀಗಾಗಿ ಭಾರತಕ್ಕೆ ಸವಾಲಿನ ಗುರಿ ಎದುರಾಗಿದೆ.

ಭಾರತ ಪರ ಶಾರ್ದೂಲ್‌ ಠಾಕೂರ್‌ 2 ವಿಕೆಟ್‌ ಕಿತ್ತರು. ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌ ಮತ್ತು ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ಮಳೆಯಿಂದಾಗಿ ಪಂದ್ಯವನ್ನು 40 ಓವರ್‌ಗೆ ಇಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.