ADVERTISEMENT

ಟಾಸ್ ಗೆದ್ದ ವಿಂಡೀಸ್‌ಗೆ ಚೇಸಿಂಗ್‌ನತ್ತ ಒಲವು: ಉತ್ತಮ ಬ್ಯಾಟಿಂಗ್ ಆರಂಭಿಸಿದ ಭಾರತ

ಏಕದಿನ ಕ್ರಿಕೆಟ್‌ ಸರಣಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 9:11 IST
Last Updated 18 ಡಿಸೆಂಬರ್ 2019, 9:11 IST
   

ವಿಶಾಖಪಟ್ಟಣ:ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ನೀಡಿದ್ದ ಸವಾಲಿನ ಗುರಿಯನ್ನು ನಿರಾಯಾಸವಾಗಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್‌ ತಂಡ, ಎರಡನೇ ಪಂದ್ಯದಲ್ಲಿಯೂ ಚೇಸಿಂಗ್‌ನತ್ತ ಒಲವು ತೋರಿದೆ. ಹೀಗಾಗಿ ಟಾಸ್‌ ಗೆದ್ದರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶವನ್ನುಭಾರತಕ್ಕೆ ಬಿಟ್ಟುಕೊಟ್ಟಿದೆ.

ಮೊದಲ ಪಂದ್ಯದಲ್ಲಿ ಭಾರತ 287 ರನ್‌ ಕಲೆ ಹಾಕಿತ್ತು. ವಿರಾಟ್‌ ಕೊಹ್ಲಿ ಬಳಗದ ಬೌಲರ್‌ಗಳ ಎದುರು ದಿಟ್ಟ ಆಟವಾಡಿದ್ದ ವಿಂಡೀಸ್‌ ಕೇವಲ ಎರಡು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತ್ತು. ಹೀಗಾಗಿ ವಿಂಡೀಸ್‌ ಈ ಪಂದ್ಯದಲ್ಲಿಯೂ ಅದೇ ಲೆಕ್ಕಾಚಾರದಲ್ಲಿದೆ.

ಇಲ್ಲಿನವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಪಂದ್ಯದಲ್ಲಿ ಭಾರತ 16 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ,92ರನ್ ಕಲೆಹಾಕಿದೆ. ಉತ್ತಮ ಆರಂಭ ಒದಗಿಸಿರುವ ಕೆ.ಎಲ್‌. ರಾಹುಲ್‌ ಹಾಗೂ ರೋಹಿತ್‌ ಶರ್ಮಾ, ಪ್ರವಾಸಿ ಪಡೆಯ ನಾಯಕನ ಲೆಕ್ಕಾಚಾರ ಉಲ್ಟಾ ಮಾಡುವಂತೆ ಬ್ಯಾಟ್‌ ಬೀಸುತ್ತಿದ್ದಾರೆ.

ADVERTISEMENT

ರಾಹುಲ್‌ 46ಎಸೆತಗಳಲ್ಲಿ3 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ50 ರನ್‌ ಗಳಿಸಿದ್ದಾರೆ. ರೋಹಿತ್‌ 50ಎಸೆತಗಳಲ್ಲಿ3 ಬೌಂಡರಿಹಾಗೂ1 ಸಿಕ್ಸರ್‌ ಸಹಿತ 40 ರನ್‌ ಗಳಿಸಿ ಆಡುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಶಿವಂ ದುಬೆ ಬದಲು ಈ ಪಂದ್ಯದಲ್ಲಿ ಶಾರ್ದೂಲ್‌ ಠಾಕೂರ್‌ಗೆ ಅವಕಾಶ ನೀಡಲಾಗಿದೆ. ವಿಂಡೀಸ್‌ ಪಡೆಯಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಆರಂಭಿಕ ಸುನೀಲ್‌ ಆ್ಯಂಬ್ರಿಸ್‌ ಹಾಗೂ ಹೇಡನ್‌ ವಾಲ್ಶ್‌ ಜೂನಿಯರ್‌ ಬದಲು ಎವಿನ್‌ ಲೂಯಿಸ್‌, ಖಾರಿ ಪಿಯೆರೆ ಸ್ಥಾನಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.