
ಶತಕ ದಾಖಲಿಸಿದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ
(ಪಿಟಿಐ ಚಿತ್ರ )
ರಾಂಚಿ: ಏಕದಿನ ಕ್ರಿಕೆಟ್ ಮಾದರಿಯ ‘ದಿಗ್ಗಜ ಜೋಡಿ’ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅಬ್ಬರದ ಆಟಕ್ಕೆ ಜಯ ಒಲಿಯಿತು.
ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಕ್ರೀಡಾಂಗಣದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ಎದುರು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 17 ರನ್‌ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.
ಇದಕ್ಕೆ ಪ್ರಮುಖವಾಗಿ ಕಾರಣವಾಗಿದ್ದು ವಿರಾಟ್ ಮತ್ತು ರೋಹಿತ್ ಅವರ ಅಮೋಘ ಬ್ಯಾಟಿಂಗ್. ಏಕದಿನ ಕ್ರಿಕೆಟ್‌ನಲ್ಲಿ 52ನೇ ಶತಕ ದಾಖಲಿಸಿದರು. ರೋಹಿತ್ 60ನೇ ಅರ್ಧಶತಕ ಹೊಡೆದರು. ಇಬ್ಬರೂ ಎರಡನೇ ವಿಕೆಟ್ ಜೊತೆಯಾಟದಲ್ಲಿ 136 ರನ್‌ಗಳನ್ನೂ ಸೇರಿಸಿದರು. ಇದರಿಂದಾಗಿ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 349 ರನ್ ಗಳಿಸಿತು.
ಆದರೆ ಪ್ರವಾಸಿ ತಂಡದ ಕೆಳಕ್ರಮಾಂಕದ ಬ್ಯಾಟರ್‌ಗಳಾದ ಮಾರ್ಕೊ ಯಾನ್ಸೆನ್ (70; 39ಎ) ಮತ್ತು ಕಾರ್ಬಿನ್ ಬಾಷ್ (67; 51ಎ) ದಿಟ್ಟ ಹೋರಾಟದ ಮೂಲಕ ಭಾರತ ತಂಡದಿಂದ ಗೆಲುವು ಕಸಿದುಕೊಳ್ಳುವ ಬೆದರಿಕೆ ಒಡ್ಡಿದ್ದರು. ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಅನುಭವಿ ಬೌಲರ್‌ಗಳ ಗೈರು ಈ ಹಂತದಲ್ಲಿ ಕಾಡಿತ್ತು. ಆದರೆ ಕುಲದೀಪ್ ಯಾದವ್ (68ಕ್ಕೆ4) ಮತ್ತು ಹರ್ಷಿತ್ ರಾಣಾ (65ಕ್ಕೆ3) ತುಸು ದುಬಾರಿಯಾದರೂ ವಿಕೆಟ್ ಉರುಳಿಸಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡವು 332 ರನ್‌ಗಳಿಗೆ ಆಲೌಟ್ ಆಯಿತು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭದಲ್ಲಿಯೇ ಆಘಾತವಾಯಿತು. ಹರ್ಷಿತ್ ರಾಣಾ ಅವರು ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ರಿಯಾನ್ ರಿಕೆಲ್ಟನ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಕಬಳಿಸಿದರು. ಇಬ್ಬರೂ ಬ್ಯಾಟರ್‌ಗಳು ಖಾತೆ ತೆರೆಯದೇ ನಿರ್ಗಮಿಸಿದರು. ಇನ್ನೊಂದೆಡೆ ಎಡಗೈ ವೇಗಿ ಆರ್ಷದೀಪ್ ಸಿಂಗ್ ಅವರು ಏಡನ್ ಮರ್ಕರಂ ವಿಕೆಟ್ ಗಳಿಸಿದರು. ಇದರಿಂದಾಗಿ ತಂಡವು 11 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಭಾರತ ತಂಡದ ಹಂಗಾಮಿ ನಾಯಕ ಮತ್ತು ವಿಕೆಟ್‌ಕೀಪರ್ ಕೆ.ಎಲ್. ರಾಹುಲ್ ಅವರು ಮರ್ಕರಂ ಮತ್ತು ಕ್ವಿಂಟನ್ ಅವರ ಕ್ಯಾಚ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ರಾಹುಲ್ (60; 56ಎ, 4X2, 6X3) ಅರ್ಧಶತಕ ಹೊಡೆದು ತಂಡದ ಮೊತ್ತ ಹೆಚ್ಚಲು ಕಾರಣರಾದರು. ರವೀಂದ್ರ ಜಡೇಜ 20 ಎಸೆತಗಳಲ್ಲಿ 32 ರನ್ ಹೊಡೆದು ಉಪಯುಕ್ತ ಕಾಣಿಕೆ ನೀಡಿದರು.
ಆದರೆ ಮ್ಯಾಥ್ಯೂ ಬ್ರೀಜ್ಕೆ (72; 80ಎ) ಅವರು ತುಸು ಚೇತರಿಕೆ ನೀಡಿದರು. ಅವರಿಗೆ ಟೋನಿ ಡಿ ಝಾರ್ಜಿ (39; 35ಎ) ಮತ್ತು ಡೆವಾಲ್ಡ್ ಬ್ರೆವಿಸ್ (37 ರನ್) ಜೊತೆ ನೀಡಿದರು. ಅವರನ್ನೂ ಕಟ್ಟಿಹಾಕುವಲ್ಲಿ ಕುಲದೀಪ್ ಯಾದವ್ ಮತ್ತು ಹರ್ಷಿತ್ ಯಶಸ್ವಿಯಾದರು.
ಆದರೆ ಮಾರ್ಕೊ ಅವರ ಅಬ್ಬರಕ್ಕೆ ಬೌಲರ್‌ಗಳು ಬಸವಳಿದರು. 39 ಎಸೆತಗಳಲ್ಲಿ 70 ರನ್ ಗಳಿಸಿದ ಯಾನ್ಸೆನ್ 8 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಕಾರ್ಬಿನ್ ಬಾಷ್ ಕೊನೆಯವರಾಗಿ ಔಟಾಗುವವರೆಗೂ ತಂಡದ ಗೆಲುವಿನ ಆಸೆ ಜೀವಂತವಾಗಿತ್ತು. ಅವರ ವಿಕೆಟ್ ಪಡೆಯುವಲ್ಲಿ ಕನ್ನಡಿಗ ಪ್ರಸಿದ್ಧಕೃಷ್ಣ ಕೊನೆಯ ಓವರ್‌ನಲ್ಲಿ ಸಫಲರಾದರು.
ಭಾರತ: 8ಕ್ಕೆ 349 (50 ಓವರ್‌ಗಳಲ್ಲಿ)
ಜೈಸ್ವಾಲ್ ಸಿ ಕ್ವಿಂಟನ್ ಬಿ ಬರ್ಗರ್ 18 (16ಎ, 4x2, 6x1)
ರೋಹಿತ್ ಎಲ್‌ಬಿಡಬ್ಲ್ಯು ಬಿ ಯಾನ್ಸನ್ 57 (51ಎ, 4x5, 6x3)
ಕೊಹ್ಲಿ ಸಿ ರಿಕೆಲ್ಟನ್ ಬಿ ಬರ್ಗರ್ 135 (120ಎ, 4x11, 6x7)
ಗಾಯಕವಾಡ ಸಿ ಬ್ರೆವಿಸ್ ಬಿ ಬಾರ್ಟ್‌ಮನ್ 8 (14ಎ)
ವಾಷಿಂಗ್ಟನ್ ಸಿ ಕಾರ್ಬಿನ್ ಬಿ ಬಾರ್ಟ್‌ಮನ್ 13 (19ಎ, 6x1)
ರಾಹುಲ್ ಸಿ ಕ್ವಿಂಟನ್ ಬಿ ಯಾನ್ಸನ್ 60 (56ಎ, 4x2, 6x3)
ಜಡೇಜ ಸಿ ಮರ್ಕರಂ ಬಿ ಕಾರ್ಬಿನ್ 32 (20ಎ, 4x2, 6x1)
ಹರ್ಷಿತ್ ರಾಣಾ ಔಟಾಗದೇ 3 (2ಎ)
ಅರ್ಷದೀಪ್ ಬಿ ಕಾರ್ಬಿನ್ 0 (1)
ಕುಲದೀಪ್ ಯಾದವ್ ಔಟಾಗದೇ 0 (1ಎ)
ಇತರೆ: 23 (ಬೈ 5, ಲೆಗ್‌ಬೈ 4, ವೈಡ್ 14)
ವಿಕೆಟ್ ಪತನ: 1-25 (ಯಶಸ್ವಿ ಜೈಸ್ವಾಲ್, 3.1), 2-161 (ರೋಹಿತ್ ಶರ್ಮಾ, 21.2), 3-183 (ಋತುರಾಜ್ ಗಾಯಕವಾಡ, 26.3), 4-200 (ವಾಷಿಂಗ್ಟನ್ ಸುಂದರ್, 30.3), 5-276 (ವಿರಾಟ್ ಕೊಹ್ಲಿ, 42.5), 6-341 (ಕೆ.ಎಲ್. ರಾಹುಲ್, 48.5), 7-347 (ರವೀಂದ್ರ ಜಡೇಜ, 49.4), 8-347 (ಅರ್ಷದೀಪ್ ಸಿಂಗ್, 49.5)
ಬೌಲಿಂಗ್: ಮಾರ್ಕೊ ಯಾನ್ಸೆನ್ 10–0–76–2, ನಾಂದ್ರೆ ಬರ್ಗರ್ 10–0–65–2, ಕಾರ್ಬಿನ್ ಬಾಷ್ 10–0–66–2, ಒಟ್ನೀಲ್ ಬಾರ್ಟ್‌ಮನ್ 10–0–60–2, ಪ್ರೆನೆಲನ್ ಸುಬ್ರಾಯನ್ 10–0–73–0
ದಕ್ಷಿಣ ಆಫ್ರಿಕಾ: 332 (49.2 ಓವರ್‌ಗಳಲ್ಲಿ)
ಮರ್ಕರಂ ಸಿ ರಾಹುಲ್ ಬಿ ಅರ್ಷದೀಪ್ 7 (15ಎ, 4x1)
ರಿಕೆಲ್ಟನ್ ಬಿ ರಾಣಾ 0 (1ಎ)
ಕ್ವಿಂಟನ್ ಸಿ ರಾಹುಲ್ ಬಿ ರಾಣಾ 0 (2ಎ)
ಬ್ರೀಜ್ ಸಿ ಕೊಹ್ಲಿ ಬಿ ಕುಲದೀಪ್ 72 (80ಎ, 4x8, 6x1)
ಝಾರ್ಜಿ ಎಲ್‌ಬಿಡಬ್ಲ್ಯು ಬಿ ಕುಲದೀಪ್ 39 (35ಎ, 4x7)
ಬ್ರೆವಿಸ್ ಸಿ ಗಾಯಕವಾಡ ಬಿ ರಾಣಾ 37 (28ಎ, 4x2, 6x3)
ಯಾನ್ಸೆನ್ ಸಿ ಜಡೇಜ ಬಿ ಕುಲದೀಪ್ 70 (39ಎ, 4x8, 6x3)
ಕಾರ್ಬಿನ್ ಸಿ ರೋಹಿತ್ ಬಿ ಪ್ರಸಿದ್ಧ 67 (51ಎ, 4x5, 6x4)
ಸುಬ್ರಾಯನ್ ಸಿ ರಾಹುಲ್ ಬಿ ಕುಲದೀಪ್ 17 (16ಎ, 4x1, 6x1)
ಬರ್ಗರ್ ಸಿ ರಾಹುಲ್ ಬಿ ಅರ್ಷದೀಪ್ 17 (23ಎ, 4x2)
ಬಾರ್ಟ್‌ಮನ್ ಔಟಾಗದೇ 0 (6ಎ)
ಇತರೆ: 6 (ಲೆಗ್‌ಬೈ 3, ವೈಡ್ 3)
ವಿಕೆಟ್ ಪತನ: 1-7 (ರಿಯಾನ್ ರಿಕೆಲ್ಟನ್, 1.1), 2-7 (ಕ್ವಿಂಟನ್ ಡಿ ಕಾಕ್, 1.3), 3-11 (ಏಡೆನ್ ಮಾರ್ಕರಂ, 4.4), 4-77 (ಟೋನಿ ಡಿ ಝಾರ್ಜಿ, 14.6), 5-130 (ಡಿವಾಲ್ಡ್ ಬ್ರೆವಿಸ್, 21.4), 6-227 (ಮಾರ್ಕೊ ಯಾನ್ಸೆನ್, 33.1), 7-228 (ಮ್ಯಾಥ್ಯೂ ಬ್ರೀಜ್, 33.3), 8-270 (ಪ್ರೆನೆಲನ್ ಸುಬ್ರಾಯನ್, 39.3), 9-312 (ನಾಂದ್ರೆ ಬರ್ಗರ್, 46.1), 10-332
(ಕಾರ್ಬಿನ್ ಬಾಷ್, 49.2)
ಬೌಲಿಂಗ್: ಅರ್ಷದೀಪ್ ಸಿಂಗ್ 10–1–64–2, ಹರ್ಷಿತ್ ರಾಣಾ 10–0–65–3, ವಾಷಿಂಗ್ಟನ್ 3–0–18–0, ಪ್ರಸಿದ್ಧ ಕೃಷ್ಣ 7.2–1–48–1, ಕುಲದೀಪ್ ಯಾದವ್ 10–0–68–4, ರವೀಂದ್ರ ಜಡೇಜ 9–0–66–0
ಪಂದ್ಯದ ಆಟಗಾರ: ವಿರಾಟ್ ಕೊಹ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.