ಕ್ಯಾನ್‌ಬೆರಾ: ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ತಂಡದಲ್ಲಿ ಭಾರತ ನಾಲ್ಕು ಬದಲಾವಣೆಗಳನ್ನು ಮಾಡಿದೆ. ಮಾಯಾಂಕ್ ಅಗರ್ವಾಲ್, ನವದೀಪ್ ಸೈನಿ, ಮೊಹಮ್ಮದ್ ಶಮಿ ಮತ್ತು ಯುಜ್ವೇಂದ್ರ ಚಾಹಲ್ ಬದಲಿಗೆ ತಂಗರಸು ನಟರಾಜನ್, ಶುಭ್‌ಮನ್ ಗಿಲ್, ಶಾರ್ದುಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ನಟರಾಜನ್ ಅವರಿಗೆ ಇದು ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ.
ಆಸ್ಟ್ರೇಲಿಯಾದಲ್ಲೂ ಮೂರು ಬದಲಾವಣೆಗಳಾಗಿವೆ. ಗಾಯಗೊಂಡ ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರ ಬದಲಿಗೆ ಕ್ಯಾಮೆರಾನ್ ಗ್ರೀನ್, ಸೀನ್ ಅಬಾಟ್ ಮತ್ತು ಆಷ್ಟನ್ ಅಗರ್ ಪಂದ್ಯದಲ್ಲಿ ಆಡುತ್ತಿದ್ದಾರೆ. ಗ್ರೀನ್‌ಗೆ, ಇದು ಮೊದಲ ಅಂತರರಾಷ್ಟ್ರೀಯ ಪಂದ್ಯವಾಗಿದೆ.
ಇನ್ನು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲಿಯೇ ಆಘಾತ ಎದುರಾಯಿತು. 16 ರನ್ ಗಳಿಸಿದ ಶಿಖರ್ ಧವನ್ ಔಟಾಗಿ ಪೆವಿಲಿಯನ್ ಸೇರಿದಂತೆ 29 ಬಾಲ್‌ಗಳಿಂದ 33 ರನ್ ಗಳಿಸಿದ್ದ ಶುಭ್‌ಮನ್ ಗಿಲ್ ಎಲ್‌ಬಿಗೆ ಔಟಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.