ADVERTISEMENT

ಟಿ20 ಕ್ರಿಕೆಟ್ | ಇಂಗ್ಲೆಂಡ್ ಎದುರು ಭಾರತದ ವನಿತೆಯರ ಚಾರಿತ್ರಿಕ ಸಾಧನೆ

ಇಂಗ್ಲೆಂಡ್ ಎದುರಿನ ಸರಣಿ ಕೈವಶ ಮಾಡಿಕೊಂಡ ಹರ್ಮನ್‌ ಬಳಗ

ಪಿಟಿಐ
Published 10 ಜುಲೈ 2025, 14:49 IST
Last Updated 10 ಜುಲೈ 2025, 14:49 IST
ರಾಧಾ ಯಾದವ್ 
ರಾಧಾ ಯಾದವ್    

ಮ್ಯಾಂಚೆಸ್ಟರ್: ಭಾರತ ಮಹಿಳೆಯರ ಕ್ರಿಕೆಟ್ ತಂಡವು ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಎದುರು ಟಿ20 ಸರಣಿಯನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತು. 

ಬುಧವಾರ ತಡರಾತ್ರಿ ಇಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‌ಗಳಿಂದ ಜಯಿಸಿತು. ಐದು ಪಂದ್ಯಗಳ ಸರಣಿಯಲ್ಲಿ 3–1ರಿಂದ ಮುನ್ನಡೆ ಸಾಧಿಸಿತು. 

ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎಡಗೈ ಸ್ಪಿನ್ನರ್ ರಾಧಾ ಯಾದವ್ (15ಕ್ಕೆ2) ಮತ್ತು ಶ್ರೀ ಚರಣಿ (30ಕ್ಕೆ2) ಅವರ ಪರಿಣಾಮಕಾರಿ ದಾಳಿಯ ಮುಂದೆ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 126 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. 

ADVERTISEMENT

ಗುರಿ ಬೆನ್ನಟ್ಟಿದ ಭಾರತ ತಂಡವು ಸ್ಮೃತಿ ಮಂದಾನ (32; 31ಎ, 4X5) ಮತ್ತು ಶಫಾಲಿ ವರ್ಮಾ (31; 19ಎ, 4X6) ಅವರ ಉತ್ತಮ  ಆರಂಭ ನೀಡಿದ್ದರಿಂದ ಸುಲಭ ಜಯ ಸಾಧಿಸಿತು. 17 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 127 ರನ್‌ ಹೊಡೆದು ಗೆದ್ದಿತು. ಜಿಮಿಮಾ ರಾಡ್ರಿಗಸ್ (ಅಜೇಯ 24; 22ಎ, 4X1) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (26; 25ಎ, 4X3) ಅವರು ಉತ್ತಮ ಕಾಣಿಕೆ ನೀಡಿದರು. 

ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇದೆ. 

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 20 ಓವರ್‌ಗಳಲ್ಲಿ 7ಕ್ಕೆ126 (ಸೋಫಿಯಾ ಡಂಕ್ಲಿ 22, ಟಾಮಿ ಬೇಮೌಂಟ್ 20, ಪೇಜ್ ಸ್ಕಾಲ್‌ಫೀಲ್ಡ್‌ 16, ಸೋಫಿ ಎಕ್ಲೆಸ್ಟೊನ್ ಔಟಾಗದೇ 16, ಶ್ರೀ ಚರಣಿ 30ಕ್ಕೆ2, ರಾಧಾ ಯಾದವ್ 15ಕ್ಕೆ2) ಭಾರತ: 17 ಓವರ್‌ಗಳಲ್ಲಿ 4ಕ್ಕೆ127 (ಸ್ಮೃತಿ ಮಂದಾನ 32, ಶಫಾಲಿ ವರ್ಮಾ 31, ಜಿಮಿಮಾ ರಾಡ್ರಿಗಸ್ ಔಟಾಗದೇ 24, ಹರ್ಮನ್‌ಪ್ರೀತ್ ಕೌರ್ 26, ಶಾರ್ಲೆಟ್ ಡೀನ್ 29ಕ್ಕೆ1, ಐಸಿ ವಾಂಗ್ 18ಕ್ಕೆ1) ಫಲಿತಾಂಶ: ಭಾರತ ತಂಡಕ್ಕೆ 6 ವಿಕೆಟ್‌ಗಳ ಜಯ. ಸರಣಿಯಲ್ಲಿ  ಭಾರತಕ್ಕೆ 3–1ರ ಮುನ್ನಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.