
ಸಂಜು ಸ್ಯಾಮ್ಸನ್ ಅಭಿಷೇಕ್ ಶರ್ಮಾ
ಪಿಟಿಐ ಚಿತ್ರ
ಚೆನೈ: ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್‌ನ ಸೂಪರ್ 8ರ ಪಂದ್ಯದಲ್ಲಿ ಭಾರತ ತಂಡವು ಪವರ್ ಪ್ಲೇನಲ್ಲಿ ಒಂದು ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿತ್ತು. ಆ ಮೂಲಕ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಪವರ್‌ಪ್ಲೇನಲ್ಲಿ ತನ್ನ ಮೂರನೇ ಗರಿಷ್ಟ ರನ್ ಕಲೆಹಾಕಿದ ದಾಖಲೆ ಮಾಡಿತು.
ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳು ಅಬ್ಬರಿಸಿದರು. ಲಯ ಕಳೆದುಕೊಂಡಿದ್ದ ಅಭಿಷೇಕ್ ಶರ್ಮಾ ಲಯಕ್ಕೆ ಮರಳಿದರೆ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಸಂಜು ಸ್ಯಾಮ್ಸನ್ ಆರಂಭಿಕರಾಗಿ 15 ಎಸೆತಗಳಲ್ಲಿ 24 ರನ್ ಗಳಿಸುವ ಮೂಲಕ ಭಾರತಕ್ಕೆ ಭರ್ಜರಿ ಆರಂಭ ನೀಡಿದರು.
ಬಳಿಕ ಕ್ರೀಸ್‌ಗೆ ಬಂದ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಕ್ರಮವಾಗಿ 13 ಎಸೆತಗಳಲ್ಲಿ 33 ರನ್ ಹಾಗೂ 9 ಎಸೆತಗಳಲ್ಲಿ 15 ರನ್ ಗಳಿಸಿದರು. ಇವರ ಬಲದಿಂದ ಪವರ್ ಪ್ಲೇನಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 80ರನ್ ಕಲೆಹಾಕಿತು.
ಟಿ20 ವಿಶ್ವಕಪ್‌ನ ಪವರ್‌ಪ್ಲೇನಲ್ಲಿ ಭಾರತದ ಅತ್ಯಧಿಕ ರನ್‌ಗಳು
86/1 – ಜಿಂಬಾಂಬ್ವೆ ವಿರುದ್ಧ 2026
82/2 - ಸ್ಕಾಟ್ಲೆಂಡ್ ವಿರುದ್ಧ 2021
80/1 - ಜಿಂಬಾಬ್ವೆ ವಿರುದ್ಧ 2026
76/1 - ನ್ಯೂಜಿಲೆಂಡ್ ವಿರುದ್ಧ 2007
60/1 - ಆಸ್ಟ್ರೇಲಿಯಾ ವಿರುದ್ಧ 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.