ಸಮಿತ್ ದ್ರಾವಿಡ್
(ಚಿತ್ರ ಕೃಪೆ: X/@StarSportsKan)
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯಲಿರುವ 19 ವರ್ಷದವರೊಳಗಿನ ಏಕದಿನ ಹಾಗೂ ನಾಲ್ಕು ದಿನಗಳ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ದಿಗ್ಗಜ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರು ಆಯ್ಕೆಯಾಗಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು (ಶನಿವಾರ) ತಂಡವನ್ನು ಪ್ರಕಟಿಸಿದೆ. ಕರ್ನಾಟಕದ ಯುವ ಆಟಗಾರ ಸಮಿತ್, ಅಪ್ಪನ ಹಾದಿಯಲ್ಲಿ ಭಾರತೀಯ ಕ್ರಿಕೆಟ್‌ಗೆ ಕಾಲಿಡುವ ತವಕದಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ದ ಪುದುಚೇರಿಯಲ್ಲಿ ಮೂರು ಪಂದ್ಯಗಳ ಏಕದಿನ ಮತ್ತು ಚೆನ್ನೈಯಲ್ಲಿ ನಾಲ್ಕು ದಿನಗಳ ಎರಡು ಟೆಸ್ಟ್ ಸರಣಿ ಆಯೋಜನೆಯಾಗಲಿದೆ.
ಸಮಿತ್ ಅವರಲ್ಲದೆ ಕರ್ನಾಟಕದಿಂದ ಕಾರ್ತಿಕೇಯ ಕೆ.ಪಿ, ಸಮರ್ಥ್ ಎನ್ ಮತ್ತು ಹಾರ್ದಿಕ್ ರಾಜ್ ಆಯ್ಕೆಯಾಗಿದ್ದಾರೆ.
19 ವರ್ಷದವರೊಳಗಿನ ಭಾರತ ತಂಡ ಇಂತಿದೆ:
ಏಕದಿನ ಸರಣಿ:
ಮೊಹಮ್ಮದ್ ಅಮಾನ್ (ನಾಯಕ), ರುದ್ರ ಪಟೇಲ್ (ಉಪನಾಯಕ), ಸಾಹೀಲ್ ಪ್ರಕಾಶ್, ಕಾರ್ತಿಕೇಯ ಕೆ.ಪಿ., ಕಿರಣ್ ಚೊರ್‌ಮಲೆ, ಅಭಿಜ್ಞಾನ ಕುಂಡು, ಹರ್‌ವಂಶ್ ಸಿಂಗ್ ಪಂಗಲಿಯಾ, ಸಮಿತ್ ದ್ರಾವಿಡ್, ಯುಧಾಜಿತ್ ಗುಹಾ, ಸಮರ್ಥ್ ಎನ್, ನಿಖಿಲ್ ಕುಮಾರ್, ಚೇತನ್ ಶರ್ಮಾ, ಹಾರ್ದಿಕ್ ರಾಜ್, ರೋಹಿತ್ ರಜಾವತ್, ಮೊಹಮ್ಮದ್ ಇನಾನ್.
ನಾಲ್ಕು ದಿನಗಳ ಟೆಸ್ಟ್ ಸರಣಿ:
ವೈಭವ್ ಸೂರ್ಯವಂಶಿ, ನಿತ್ಯ ಪಾಂಡೆ, ವಿಹಾನ್ ಮಲ್ಹೋತ್ರಾ, ಸೋಹಂ ಪಟ್‌ವರ್ಧನ್, ಕಾರ್ತಿಕೇಯ ಕೆ.ಪಿ., ಸಮಿತ್ ದ್ರಾವಿಡ್, ಅಭಿಜ್ಞಾನ ಕುಂಡು, ಹರ್‌ವಂಶ್ ಸಿಂಗ್ ಪಂಗಲಿಯಾ, ಚೇತನ್ ಶರ್ಮಾ, ಸಮರ್ಥ್ ಎನ್, ಆದಿತ್ಯ ರಾವತ್, ನಿಖಿಲ್ ಕುಮಾರ್, ಅನ್‌ಮೋಲ್‌ಜೀತ್ ಸಿಂಗ್, ಆದಿತ್ಯ ಸಿಂಗ್ ಮತ್ತು ಮೊಹಮ್ಮದ್ ಇನಾನ್.
ವೇಳಾಪಟ್ಟಿ ಇಂತಿದೆ:
ಏಕದಿನ ಸರಣಿ:
ಸೆ.21: ಮೊದಲ ಏಕದಿನ, ಪುದುಚೇರಿ
ಸೆ.23: 2ನೇ ಏಕದಿನ, ಪುದುಚೇರಿ
ಸೆ.26: 3ನೇ ಏಕದಿನ, ಪುದುಚೇರಿ
ನಾಲ್ಕು ದಿನಗಳ ಟೆಸ್ಟ್ ಸರಣಿ:
ಸೆ.30ರಿಂದ ಅ.3: ಮೊದಲ ಪಂದ್ಯ, ಚೆನ್ನೈ
ಅ.7ರಿಂದ ಅ.10: 2ನೇ ಪಂದ್ಯ, ಚೆನ್ನೈ
(ಎಲ್ಲ ಪಂದ್ಯಗಳು ಬೆಳಿಗ್ಗೆ 9.30ಕ್ಕೆ ಸರಿಯಾಗಿ ಆರಂಭವಾಗಲಿವೆ.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.