ADVERTISEMENT

ಐಪಿಎಲ್‌ನಲ್ಲಿ ಅತಿಹೆಚ್ಚು ಪಂದ್ಯ ಆಡಿದ ಸಾಧನೆ: ರೈನಾರನ್ನು ಹಿಂದಿಕ್ಕಿದ ಧೋನಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 14:30 IST
Last Updated 2 ಅಕ್ಟೋಬರ್ 2020, 14:30 IST
   

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂಎಸ್‌ ಧೋನಿ ಅವರು ಇಂದು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧನಡೆಯುತ್ತಿರುವ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್‌ನಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಆಡಿದ ಸಾಧನೆ ಮಾಡಿದರು.

ಧೋನಿ ಅವರಿಗೆ ಇದು 194ನೇ ಪಂದ್ಯ. ಸಹ ಆಟಗಾರ ಸುರೇಶ್‌ ರೈನಾ ಅವರುಐಪಿಎಲ್‌ನಲ್ಲಿ 193ಪಂದ್ಯಗಳಲ್ಲಿ ಆಡಿದ್ದಾರೆ.

ಧೋನಿ ಇದುವರೆಗೆ ಒಟ್ಟು 163 ಪಂದ್ಯಗಳಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ್ದು, 100ರಲ್ಲಿ ಗೆಲುವು ಸಾಧಿಸಿದೆ. ಇದುವರೆಗೆ ಒಟ್ಟು 4,476 ರನ್‌ ರನ್ ಗಳಿಸಿದ್ದಾರೆ. 212 ಸಿಕ್ಸರ್‌ಗಳನ್ನು ಸಿಡಿಸಿದ್ದು, ಹೆಚ್ಚು ಸಿಕ್ಸರ್‌ ಸಿಡಿಸಿದ ಭಾರತೀಯದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಜೊತೆಗೆ 39 ಸ್ಟಂಪಿಂಗ್‌ ಮತ್ತು 102 ಕ್ಯಾಚ್‌ ಪಡೆದಿದ್ದಾರೆ.

ADVERTISEMENT

ಸನ್‌ರೈಸರ್ಸ್‌ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡುತ್ತಿದೆ. 6 ಓವರ್‌ಗಳ ಆಟ ಮುಗಿದಿದ್ದು, ರೈಸರ್ಸ್ 1 ವಿಕೆಟ್‌ ನಷ್ಟಕ್ಕೆ 42 ರನ್‌ ಗಳಿಸಿದೆ. ಕನ್ನಡಿಗ ಮನಿಷ್‌ ಪಾಂಡೆ (27)ಮತ್ತು ನಾಯಕ ಡೇವಿಡ್‌ ವಾರ್ನರ್‌ (13) ಕ್ರೀಸ್‌ನಲ್ಲಿದ್ದಾರೆ.

ಆಡುವ ಹನ್ನೊಂದರ ಬಳಗ
ಚೆನ್ನೈ ಸೂಪರ್‌ಕಿಂಗ್ಸ್‌:ಶೇನ್‌ ವಾಟ್ಸನ್‌, ಅಂಬಟಿ ರಾಯುಡು, ಫಾಫ್‌ ಡು ಪ್ಲೆಸಿ, ಕೇದಾರ್‌ ಜಾಧವ್‌,ಎಂಎಸ್‌ ಧೋನಿ (ನಾಯಕ/ವಿಕೆಟ್ ಕೀಪರ್‌), ಡ್ವೇನ್‌ ಬ್ರಾವೊ, ರವಿಂದ್ರ ಜಡೇಜಾ, ಸ್ಯಾಮ್‌ ಕರನ್, ಶಾರ್ದೂಲ್‌ ಠಾಕರೂರ್‌, ಪಿಯೂಷ್‌ ಚಾವ್ಲಾ, ದೀಪಕ್‌ ಚಹಾರ್

ಸನ್‌ರೈಸರ್ಸ್‌:ಡೇವಿಡ್‌ ವಾರ್ನರ್‌ (ನಾಯಕ), ಜಾನಿ ಬೈರ್ಸ್ಟ್ರೋವ್‌ (ವಿಕೆಟ್ ಕೀಪರ್‌), ಮನೀಷ್‌ ಪಾಂಡೆ, ಕೇನ್‌ ವಿಲಿಯಮ್ಸನ್‌,ಅಬ್ದುಲ್‌ ಸಮದ್‌, ಅಭಿಶೇಕ್‌ ಶರ್ಮಾ, ಪ್ರಿಯಂ ಗರ್ಗ್‌, ರಶೀದ್‌ ಖಾನ್‌, ಭುವನೇಶ್ವರ್ ಕುಮಾರ್‌, ಖಲೀಲ್‌ ಅಹಮದ್‌, ಟಿ.ನಟರಾಜನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.