ADVERTISEMENT

ಐಪಿಎಲ್–2020: 5 ಸಾವಿರ ರನ್ ಪೂರೈಸಿದ ರೋಹಿತ್ ಶರ್ಮಾ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 14:19 IST
Last Updated 1 ಅಕ್ಟೋಬರ್ 2020, 14:19 IST
   

ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ ಐಪಿಎಲ್‌ನಲ್ಲಿ ಐದು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಇದರೊಂದಿಗೆ ಈ ಸಾಧನೆ ಮಾಡಿದ ಮೂರನೇಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೆ ಭಾಜನರಾದರು.

ರೋಹಿತ್‌ಐಪಿಎಲ್‌ನಲ್ಲಿ ಇದುವರೆಗೆ 192 ಪಂದ್ಯಗಳ 187 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸುರೇಶ್‌ ರೈನಾಐಪಿಎಲ್‌ನಲ್ಲಿ 5 ಸಾವಿರ ರನ್‌ ಕಲೆಹಾಕಿರುವ ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳು. ಕೊಹ್ಲಿ172 ಇನಿಂಗ್ಸ್‌ಗಳಲ್ಲಿ 5,430 ರನ್‌ ಮತ್ತು ರೈನಾ 189 ಇನಿಂಗ್ಸ್‌ಗಳಲ್ಲಿ 5,368 ರನ್‌ ಕಲೆಹಾಕಿದ್ದಾರೆ.

ADVERTISEMENT

ಇಂದು ಅಬುಧಾಬಿಯಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಸೆಣಸಾಟ ನಡೆಸುತ್ತಿವೆ.ಈ ತಂಡಗಳು ಅಂಕಪಟ್ಟಿಯಲ್ಲಿ ಕ್ರಮವಾಗಿ 5 ಮತ್ತು 6ನೇ ಸ್ಥಾನಗಳಲ್ಲಿವೆ.

ಸದ್ಯ ಮೂರು ಓವರ್‌ಗಳ ಮುಕ್ತಾಯವಾಗಿದ್ದು,ಮುಂಬೈ 1 ವಿಕೆಟ್‌ ಕಳೆದುಕೊಂಡು 18 ರನ್‌ ಗಳಿಸಿದೆ. ನಾಯಕ ರೋಹಿತ್‌ (9) ಮತ್ತು ಸೂರ್ಯಕುಮಾರ್‌ ಯಾದವ್ (9)‌ ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.