ಚೆನ್ನೈ: ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಮುಂದೂಡಿದ್ದು ನನಗೆ ಒಳ್ಳೆಯದೇ ಆಯಿತು ಎಂದು ಮಧ್ಯಮವೇಗದ ಬೌಲರ್ ದೀಪಕ್ ಚಾಹರ್ ಹೇಳಿದ್ದಾರೆ.
ಹೋದ ಡಿಸೆಂಬರ್‌ನಲ್ಲಿ ಭಾರತ ತಂಡದಲ್ಲಿ ಆಡುವ ಸಂದರ್ಭದಲ್ಲಿ ಬೆನ್ನುನೋವಿನ ಗಾಯದಿಂದಾಗಿ ಹೊರಬಿದ್ದಿದ್ದರು. ದೀರ್ಘ ವಿಶ್ರಾಂತಿಯಲ್ಲಿರುವ ಅವರು ಐಪಿೆಎಲ್ ಟೂರ್ನಿಗೆ ಮರಳಲು ಸಿದ್ಧತೆ ನಡೆಸಿದ್ದಾರೆ.
‘ನನ್ನ ಫಿಟ್‌ನೆಸ್ ಮರಳಿ ಗಳಿಸಿಕೊಳ್ಳಲು ಬಹಳಷ್ಟು ಸಮಾಯಾವಕಾಶ ಸಿಕ್ಕಂತಾಗಿದೆ. ಕಣಕ್ಕೆ ಮರಳಿ ಬೌಲಿಂಗ್ ಮಾಡಲು ಉತ್ಸುಕನಾಗಿದ್ದೇನೆ’ ಎಂದು 27 ವರ್ಷದ ಚಾಹರ್ ಹೇಳಿದ್ದಾರೆ.
‘ಒಂದೊಮ್ಮೆ ಟೂರ್ನಿಯು ಮಾರ್ಚ್ 29ಕ್ಕೆ ಆರಂಭವಾಗಿದ್ದರೆ, ಮೊದಲ ಹಂತದ ಕೆಲವು ಪಂದ್ಯಗಳಲ್ಲಿ ಆಡಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಕೊವಿಡ್ ವೈರಸ್ ಸೋಂಕಿನ ಭೀತಿಯಿಂದಾಗಿ ಏಪ್ರಿಲ್ 15ಕ್ಕೆ ಟೂರ್ನಿಯನ್ನು ಮುಂದೂಡಲಾಗಿದೆ. ಅದರಿಂದಾಗಿ ಮತ್ತಷ್ಟು ದಿನಗಳ ಅವಕಾಶ ಸಿಕ್ಕಂತಾಗಿದೆ. ಫಿಟ್‌ನೆಸ್ ಸುಧಾರಣೆಯತ್ತ ಹೆಚ್ಚು ಚಿತ್ತ ನೆಟ್ಟಿದ್ದೇನೆ’ ಎಂದು ಚಾಹರ್ ತಾವು ಪ್ರತಿನಿಧಿಸುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.