ADVERTISEMENT

IPL 2021: ಆರ್‌ಸಿಬಿ ಜೆರ್ಸಿ ನಕಲು ಮಾಡಿದೆಯೇ ಪಂಜಾಬ್?

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 16:09 IST
Last Updated 12 ಏಪ್ರಿಲ್ 2021, 16:09 IST
ಚಿತ್ರ ಕೃಪೆ: ಐಪಿಎಲ್ ಟ್ವಿಟರ್
ಚಿತ್ರ ಕೃಪೆ: ಐಪಿಎಲ್ ಟ್ವಿಟರ್   

ಮುಂಬೈ: 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಯಾರಿಸಿದ ಜೆರ್ಸಿಯು ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ.

ಏಕ ನೋಟದಲ್ಲಿ ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಹಳೆಯ ಜೆರ್ಸಿಯನ್ನು ಹೋಲುತ್ತಿದೆ. ಇದುವೇ ಅಭಿಮಾನಿಗಳ ಆಸಕ್ತಿಯನ್ನು ಕೆರಳಿಸಿದೆ.

2009ನೇ ಇಸವಿಯಲ್ಲಿ ನಡೆದಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಹೊಂದಿದ್ದ ಜೆರ್ಸಿಯನ್ನು ಪಂಜಾಬ್ ಕಿಂಗ್ಸ್ ತಂಡದ ಹೊಸ ಜೆರ್ಸಿ ಹೋಲುತ್ತಿದೆ. ಕೆಂಪು ಹಾಗೂ ಸುವರ್ಣ ಬಣ್ಣದ ಮಿಶ್ರಣವನ್ನು ಹೊಂದಿದೆ.

ADVERTISEMENT

ಮೊದಲು ಕರ್ನಾಟಕದ ಆಟಗಾರರನ್ನು ಖರೀದಿಸಿದ ಪ್ರೀತಿ ಜಿಂಟಾ ಮಾಲಿಕತ್ವದ ಪಂಜಾಬ್ ತಂಡವೀಗ, ಆರ್‌ಸಿಬಿ ತಂಡದ ಜೆರ್ಸಿಯನ್ನೇ ನಕಲು ಮಾಡಿದೆ ಎಂದು ಅಭಿಮಾನಿಗಳು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಐಪಿಎಲ್ 2021ನೇ ಆವೃತ್ತಿಗಾಗಿ 'ಪಂಜಾಬ್ ಕಿಂಗ್ಸ್' ಎಂದು ಮರು ನಾಮಕರಣ ಮಾಡಲಾಗಿದ್ದು, ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿದೆ. ತಂಡವನ್ನು ಕರ್ನಾಟಕದ ಕೆಎಲ್ ರಾಹುಲ್ ಮುನ್ನಡೆಸುತ್ತಿದ್ದಾರೆ.

ಕಾಕತಾಳೀಯವೆಂಬಂತೆ 2009ನೇ ಇಸವಿಯಲ್ಲಿ ಆರ್‌ಸಿಬಿ ತಂಡದ ನಾಯಕರಾಗಿದ್ದ ಅನಿಲ್ ಕುಂಬ್ಳೆ ಈಗ ಪಂಜಾಬ್ ತಂಡದ ಮುಖ್ಯ ತರಬೇತುದಾರನ ಹುದ್ದೆಯನ್ನು ವಹಿಸುತ್ತಿದ್ದಾರೆ.

ಅಷ್ಟಕ್ಕೂ ಆರ್‌ಸಿಬಿ ಹಳೆಯ ಹಾಗೂ ಪಂಜಾಬ್ ಹೊಸ ಜೆರ್ಸಿ ಹೋಲಿಕೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.