ADVERTISEMENT

IPL 2021: ಜೀವನದ ಪಾಠ ಕಲಿಸಿದ ದೀಪಕ್ ಹೂಡಾ ಕ್ಯಾಚ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಏಪ್ರಿಲ್ 2021, 11:54 IST
Last Updated 19 ಏಪ್ರಿಲ್ 2021, 11:54 IST
ದೀಪಕ್ ಹೂಡಾ
ದೀಪಕ್ ಹೂಡಾ   

ಮುಂಬೈ: ಚೆಂಡನ್ನು ಮೂರು ಬಾರಿ ಕೈಚೆಲ್ಲಿದ ಬಳಿಕ ನಾಲ್ಕನೇ ಪ್ರಯತ್ನದಲ್ಲಿ ಕ್ಯಾಚ್ ಹಿಡಿಯಲು ಯಶಸ್ವಿಯಾಗಿರುವ ಪಂಜಾಬ್ ಕಿಂಗ್ಸ್ ತಂಡದ ದೀಪಕ್ ಹೂಡಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಘಟನೆ ನಡೆದಿತ್ತು. 196 ರನ್ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನತ್ತ ದಾಪುಗಾಲನ್ನಿಟ್ಟಿತ್ತು.

ಈ ನಡುವೆ ಡೆಲ್ಲಿ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಜೇ ರಿಚರ್ಡ್ಸನ್ ದಾಳಿಯಲ್ಲಿ ಕ್ಯಾಚ್ ಹಿಡಿಯುವ ಮೂಲಕ ಡೆಲ್ಲಿ ನಾಯಕ ರಿಷಭ್ ಪಂತ್ ಹೊರದಬ್ಬುವಲ್ಲಿ ಹೂಡಾ ಯಶಸ್ವಿಯಾದರು.

ADVERTISEMENT

ಪಂತ್ ಹೊಡೆದ ಚೆಂಡನ್ನು ಮೊದಲ ಪ್ರಯತ್ನದಲ್ಲಿ ಕೈಚೆಲ್ಲಿದ ಹೂಡಾ, ಇನ್ನೇನು ಚೆಂಡು ನೆಲಕ್ಕಪ್ಪಳಿಸಲಿದೆ ಎನ್ನುವಷ್ಟರಲ್ಲಿ ಎರಡನೇ ಬಾರಿ ಹಿಡಿಯುವ ಪ್ರಯತ್ನ ಮಾಡಿದರು. ಆದರೆ ಎರಡನೇ ಹಾಗೂ ಮೂರನೇ ಪ್ರಯತ್ನದಲ್ಲೂ ಚೆಂಡು ಹಿಡಿಯುವಲ್ಲಿ ಯಶಸ್ವಿಯಾಗಲಿಲ್ಲ. ಆದರೂ ಛಲ ಬಿಡದ ಹೂಡಾ ಡೈವ್ ಹೊಡೆದು ನಾಲ್ಕನೇ ಪ್ರಯತ್ನದಲ್ಲಿ ಚೆಂಡನ್ನು ಭದ್ರವಾಗಿ ಕೈಯೊಳಗೆ ಸೇರಿಸಿದರು.

ಈ ಎಲ್ಲ ಘಟನೆಗಳು ಕ್ಷಣಮಾತ್ರದಲ್ಲಿ ಸಂಭವಿಸಿತ್ತು. ಆದರೆ ದೀಪಕ್ ಹೂಡಾ ತೋರಿದ ಏಕಾಗ್ರತೆ ಹಾಗೂ ಬದ್ಧತೆಯು ಜೀವನದಲ್ಲಿ ಪ್ರತಿಯೊಬ್ಬರೂ ಆಳವಡಿಸಿಕೊಳ್ಳಬೇಕಾದ ಅನೇಕ ಪಾಠಗಳನ್ನು ಸಾರಿವೆ.

ಜೀವನದಲ್ಲಿ ಏಳು-ಬೀಳುಗಳು ಸಹಜ. ಆದರೆ ಅವುಗಳನ್ನೇ ಅವಕಾಶವನ್ನಾಗಿ ಪರಿವರ್ತಿಸಿ ಏಳಿಗೆಯತ್ತ ಮುಂದುವರಿಯಬೇಕು. ಸತತವಾಗಿ ಕಠಿಣ ಪರಿಶ್ರಮ ಮುಂದುವರಿಸಿದೆ ಖಂಡಿತವಾಗಿಯೂ ಯಶಸ್ಸು ಸಿಗಲಿದೆ ಎಂಬ ಸಂದೇಶವನ್ನು ಸಾರಿದೆ.

ಅಂದ ಹಾಗೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್ ಅಂತರದ ಗೆಲುವುದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.