ADVERTISEMENT

IPL 2021: ಐಪಿಎಲ್‌ನಿಂದ ಮುಂಬೈ ನಿರ್ಗಮನ; ಭಾವನಾತ್ಮಕ ಸಂದೇಶ ಬರೆದ ರೋಹಿತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2021, 13:00 IST
Last Updated 10 ಅಕ್ಟೋಬರ್ 2021, 13:00 IST
ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್   

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕನಿಷ್ಠ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲಾಗದೇ ನಿರ್ಗಮಿಸಿದೆ.

ಈ ಸಂದರ್ಭದಲ್ಲಿ ಫ್ರಾಂಚೈಸಿ ಹಾಗೂ ಅಭಿಮಾನಿಗಳಿಗಾಗಿ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ.

'ಏರಿಳಿತಗಳಿಂದ ಕೂಡಿದ ವರ್ಷವಿದು. ತುಂಬಾ ಪಾಠಗಳನ್ನು ಕಲಿತಿದ್ದೇವೆ. ಈ ತಂಡವು ಕಳೆದ 3–4 ವರ್ಷಗಳಲ್ಲಿ ಮಾಡಿದ ಸಾಧನೆಯ ಸೊಬಗನ್ನು ಈಗಿನ 14 ಪಂದ್ಯಗಳು ಮರೆಮಾಚಲು ಸಾಧ್ಯವಿಲ್ಲ. ನೀಲಿ ಹಾಗೂ ಚಿನ್ನದ ಪೋಷಾಕು ಧರಿಸಿದ ಪ್ರತಿಯೊಬ್ಬ ಆಟಗಾರನು ಹೆಮ್ಮೆಯಿಂದ ಆಡಿದ್ದಾರೆ. ಪ್ರತಿಯೊಬ್ಬ ಆಟಗಾರನೂ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಹಾಗಾಗಿಯೇ ನಾವು ತಂಡವಾಗಿ (ಒಂದು ಕುಟುಂಬ) ರೂಪುಗೊಂಡಿದ್ದೇವೆ' ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ, ತಲಾ ಏಳು ಗೆಲುವು ಹಾಗೂ ಸೋಲಿನೊಂದಿಗೆ ಒಟ್ಟು 14 ಅಂಕಗಳನ್ನು ಕಲೆ ಹಾಕಿತ್ತು. ಕೋಲ್ಕತ್ತ ನೈಟ್ ರೈಡರ್ಸ್ ಅಷ್ಟೇ ಅಂಕಗಳನ್ನು ಗಳಿಸಿದರೂ ರನ್‌ರೇಟ್ ಲೆಕ್ಕಾಚಾರದಲ್ಲಿ ಹಿಂದೆ ಬಿದ್ದ ಕಾರಣ ಮುಂಬೈ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಮೂಲಕ ಟೂರ್ನಿಯಿಂದಲೇ ನಿರ್ಗಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.