ADVERTISEMENT

ವಿಡಿಯೊ: ಕ್ವಾರಂಟೈನ್ ಪೂರ್ಣಗೊಳಿಸಿದ ಬಳಿಕ ಕ್ರಿಸ್ ಗೇಲ್ 'ಮೂನ್ ವಾಕ್'

ಏಜೆನ್ಸೀಸ್
Published 7 ಏಪ್ರಿಲ್ 2021, 16:06 IST
Last Updated 7 ಏಪ್ರಿಲ್ 2021, 16:06 IST
ಕ್ರಿಸ್ ಗೇಲ್
ಕ್ರಿಸ್ ಗೇಲ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ವೆಸ್ಟ್‌ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್, 'ಮೂನ್ ವಾಕ್' ಮಾಡುವ ಮೂಲಕ ಕ್ವಾರಂಟೈನ್‌ನಿಂದ ಹೊರಬರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಬಿಸಿಸಿಐ ಮಾರ್ಗಸೂಚಿಯಂತೆ ಎಲ್ಲ ಆಟಗಾರರು ಮುಂಜಾಗ್ರತಾ ಕ್ರಮವಾಗಿ ಕೋವಿಡ್-19 ಸೋಂಕು ಹರಡುವುದನ್ನು ತಗೆಗಟ್ಟುವುದರ ಭಾಗವಾಗಿ ಏಳು ದಿನಗಳ ಪ್ರತ್ಯೇಕ ವಾಸದಲ್ಲಿರುವುದು ಕಡ್ಡಾಯವಾಗಿದೆ.

ಇದರಂತೆ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿರುವ ಗೇಲ್, ಪಾಪ್ ಸ್ಟಾರ್ ಮೈಕಲ್ ಜಾನ್ಸನ್ ಅವರ 'ಸ್ಮೂತ್ ಕ್ರಿಮಿನಲ್' ಜನಪ್ರಿಯ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ವಿಡಿಯೊವನ್ನು ಹಂಚಿಕೊಂಡಿದೆ.

ಐಪಿಎಲ್‌ನ ಅತಿ ಜನಪ್ರಿಯ ಆಟಗಾರರಲ್ಲಿ ಓರ್ವರಾಗಿರುವ ಕ್ರಿಸ್ ಗೇಲ್, ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದಲೇ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದ್ದಾರೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಅತಿ ಹೆಚ್ಚು ಯಶಸ್ಸನ್ನು ಕಂಡಿರುವ 'ಯೂನಿವರ್ಸ್ ಬಾಸ್' ಖ್ಯಾತಿಯ ಗೇಲ್, ಈಗಪಂಜಾಬ್ ತಂಡದ ಪರ ಆಡುತ್ತಿದ್ದಾರೆ.

ಕಳೆದ ಋತುವಿನಲ್ಲಿಯುಎಇನಲ್ಲಿ ನಡೆದ ಟೂರ್ನಿಯಲ್ಲಿ 41 ವರ್ಷದ ಗೇಲ್, ಆಡಿರುವ ಏಳು ಪಂದ್ಯಗಳಲ್ಲಿ 41.14ರ ಸರಾಸರಿಯಲ್ಲಿ 288 ರನ್ ಕಲೆ ಹಾಕಿದ್ದರು. ಇದರಲ್ಲಿ ಗರಿಷ್ಠ 99 ರನ್ ಸೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.