ADVERTISEMENT

IPL 2021: ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ; ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮಾರ್ಚ್ 2021, 12:54 IST
Last Updated 7 ಮಾರ್ಚ್ 2021, 12:54 IST
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)   

ಮುಂಬೈ: 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿನ ಬಹುನಿರೀಕ್ಷಿತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಸೇರಿದಂತೆ ಎಲ್ಲ ಎಂಟು ತಂಡಗಳು ತನ್ನ 'ಹೋಮ್' ಹಾಗೂ 'ಅವೇ' ಪಂದ್ಯಗಳನ್ನು ತಣಸ್ಥ ತಾಣಗಳಲ್ಲಿ ಆಡಲಿವೆ.

ಇದರಿಂದಾಗಿ ಬೆಂಗಳೂರಿನ ಪಂದ್ಯಗಳನ್ನು ಚಿನ್ನಸ್ವಾಮಿ ಮೈದಾನದಲ್ಲಿನೋಡುವ ಆರ್‌ಸಿಬಿ ಅಭಿಮಾನಿಗಳ ಕನಸಿಗೆ ಹಿನ್ನೆಡೆಯಾಗಿದೆ. ಆರಂಭಿಕ ಹಂತದಲ್ಲಿ ಟೂರ್ನಿಯು ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದ್ದು,ಮುಂದಿನ ಹಂತದಲ್ಲಿ ಕ್ರೀಡಾಂಗಣಕ್ಕೆ ಪ್ರವೇಶಿಸಲುಪ್ರೇಕ್ಷಕರಿಗೆ ಅನುಮತಿ ನೀಡಬೇಕೇಎಂಬುದರ ಕುರಿತು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಲಿದೆ.

ADVERTISEMENT

ಲೀಗ್ ಹಂತದ ಎಲ್ಲ 14 ಪಂದ್ಯಗಳನ್ನು ಬೆಂಗಳೂರು ತಂಡವು ಚೆನ್ನೈ, ಮುಂಬೈ, ಅಹಮದಾಬಾದ್ ಹಾಗೂ ಕೋಲ್ಕತ್ತ ನಗರಗಳಲ್ಲಿ ಆಡಲಿವೆ.

ಏಪ್ರಿಲ್ 9ರಂದು ಚೆನ್ನೈಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿರುವ ವಿರಾಟ್ ಕೊಹ್ಲಿ ಬಳಗವು, ಐದು ಬಾರಿಯ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ. ಹಾಗಿದ್ದರೆ ತಡವೇಕೆ? ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ ಇಂತಿದೆ:

ಆರ್‌ಸಿಬಿ vs ಮುಂಬೈ, ಏ.9, ಶುಕ್ರವಾರ, ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಹೈದರಾಬಾದ್, ಏ.14, ಬುಧವಾರ, ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಕೋಲ್ಕತ್ತ, ಏ.18, ಭಾನುವಾರ, ತಾಣ: ಚೆನ್ನೈ, ಸಮಯ: ಸಂಜೆ 3.30ಕ್ಕೆ
ಆರ್‌ಸಿಬಿ vs ರಾಜಸ್ಥಾನ, ಏ.22, ಗುರುವಾರ, ತಾಣ: ಮುಂಬೈ, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಚೆನ್ನೈ, ಏ.25, ಭಾನುವಾರ, ತಾಣ: ಮುಂಬೈ, ಸಮಯ: ಸಂಜೆ 3.30ಕ್ಕೆ
ಆರ್‌ಸಿಬಿ vs ಡೆಲ್ಲಿ, ಏ.27, ಮಂಗಳವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಪಂಜಾಬ್, ಏ.30, ಶುಕ್ರವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಕೋಲ್ಕತ್ತ, ಮೇ 3, ಸೋಮವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಪಂಜಾಬ್, ಮೇ 6, ಗುರುವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಹೈದರಾಬಾದ್, ಮೇ 9, ಭಾನುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಡೆಲ್ಲಿ, ಮೇ 14, ಶುಕ್ರವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ರಾಜಸ್ಥಾನ, ಮೇ 16, ಭಾನುವಾರ, ತಾಣ: ಕೋಲ್ಕತ್ತ, ಸಮಯ: ಸಂಜೆ 3.30ಕ್ಕೆ
ಆರ್‌ಸಿಬಿ vs ಮುಂಬೈ, ಮೇ 20, ಗುರುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಚೆನ್ನೈ, ಮೇ 23, ಭಾನುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.