ADVERTISEMENT

ಸತತ 7ನೇ ಬಾರಿಯೂ ಪ್ಲೇ-ಆಫ್ ಕನಸು ಭಗ್ನ; ಪ್ರೀತಿಯ ಪಂಜಾಬ್ ಗುಡ್ ಬೈ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2021, 10:36 IST
Last Updated 9 ಅಕ್ಟೋಬರ್ 2021, 10:36 IST
ಕೆ.ಎಲ್. ರಾಹುಲ್ ಹಾಗೂ ಪ್ರೀತಿ ಜಿಂಟಾ
ಕೆ.ಎಲ್. ರಾಹುಲ್ ಹಾಗೂ ಪ್ರೀತಿ ಜಿಂಟಾ   

ದುಬೈ: ಹೆಸರು ಬದಲಾಗಿರಬಹುದು. ಆದರೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹ ಮಾಲೀಕತ್ವದ ಪಂಜಾಬ್ ಕಿಂಗ್ಸ್ ತಂಡದ ಅದೃಷ್ಟ ಮಾತ್ರ ಬದಲಾಗಿಲ್ಲ!

ಹೌದೂ, ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸತತ ಏಳನೇ ಬಾರಿಗೆ ಕನಿಷ್ಠ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸುವಲ್ಲಿ ಪಂಜಾಬ್ ತಂಡವು ವಿಫಲವಾಗಿದೆ.

ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ತಂಡವು 14 ಪಂದ್ಯಗಳಲ್ಲಿ ಆರು ಗೆಲುವಿನೊಂದಿಗೆ ಒಟ್ಟು 12 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನದೊಂದಿಗೆ ಅಭಿಯಾನವನ್ನು ಕೊನೆಗೊಳಿಸಿದೆ.

ಆರ್‌ಸಿಬಿಯಂತೆ ಪಂಜಾಬ್ ತಂಡವು ಇದುವರೆಗೆ ಟ್ರೋಫಿ ಗೆದ್ದಿಲ್ಲ. 2014ರಲ್ಲಿ 'ರನ್ನಪ್-ಅಪ್' ಪ್ರಶಸ್ತಿ ಗೆದ್ದಿರುವುದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಆದರೆ ಅಲ್ಲಿಂದ ಬಳಿಕ ಸತತ ಏಳನೇ ಬಾರಿಗೆ ಪ್ಲೇ-ಆಫ್ ಪ್ರವೇಶಿಸುವಲ್ಲಿ ವಿಫಲವಾಗಿದೆ.

ಅಂದ ಹಾಗೆ ಐಪಿಎಲ್ ಇತಿಹಾಸದತ್ತ ಗಮನ ಹಾಯಿಸಿದರೆ ಇದುವರೆಗಿನ 14 ಆವೃತ್ತಿಗಳ ಪೈಕಿ ಎರಡು ಬಾರಿ ಮಾತ್ರ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವಲ್ಲಿ ಪಂಜಾಬ್ ಯಶಸ್ವಿಯಾಗಿದೆ. 2008ರ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು.

ಪ್ರಸಕ್ತ ಸಾಲಿನಲ್ಲಷ್ಟೇ 'ಕಿಂಗ್ಸ್ ಇಲೆವೆನ್ ಪಂಜಾಬ್' ತಂಡದ ಹೆಸರನ್ನು 'ಪಂಜಾಬ್ ಕಿಂಗ್ಸ್' ಎಂದು ಬದಲಿಸಲಾಗಿತ್ತು.

ಐಪಿಎಲ್‌ನಲ್ಲಿ ಪಂಜಾಬ್ ಸಾಧನೆ:
2008: ಸೆಮಿಫೈನಲ್ (ಮೂರನೇ ಸ್ಥಾನ)
2009: 5ನೇ ಸ್ಥಾನ
2010: 8ನೇ ಸ್ಥಾನ
2011: 5ನೇ ಸ್ಥಾನ
2012: 6ನೇ ಸ್ಥಾನ
2013: 6ನೇ ಸ್ಥಾನ
2014: ರನ್ನರ್-ಅಪ್
2015: 8ನೇ ಸ್ಥಾನ
2016: 8ನೇ ಸ್ಥಾನ
2017: 5ನೇ ಸ್ಥಾನ
2018: 7ನೇ ಸ್ಥಾನ
2019: 6ನೇ ಸ್ಥಾನ
2020: 6ನೇ ಸ್ಥಾನ
2021: 6ನೇ ಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.