ADVERTISEMENT

ಸಿಎಸ್‌ಕೆ ತಂಡ ಧೋನಿ –ರೈನಾ ನಡುವಿನ ಸೌಹಾರ್ದತೆ ಮಿಸ್ ಮಾಡಿಕೊಳ್ಳುತ್ತದೆ: ಕಾಂಬ್ಳಿ

ಐಎಎನ್ಎಸ್
Published 15 ಫೆಬ್ರುವರಿ 2022, 16:19 IST
Last Updated 15 ಫೆಬ್ರುವರಿ 2022, 16:19 IST
ಸುರೇಶ್‌ ರೈನಾ
ಸುರೇಶ್‌ ರೈನಾ   

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡ ನಾಯಕ ಎಂ.ಎಸ್‌.ಧೋನಿ ಮತ್ತು ಸುರೇಶ್‌ ರೈನಾ ಅವರ ನಡುವಿನ ಸೌಹಾರ್ದತೆಯನ್ನು ಮಿಸ್‌ ಮಾಡಿಕೊಳ್ಳುತ್ತದೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವಿನೋದ್‌ ಕಾಂಬ್ಳಿ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಟಿ–20 ಕ್ರಿಕೆಟ್‌ನ ಮೆಗಾ ಹರಾಜು ಪ್ರಕ್ರಿಯೆ ಇತ್ತೀಚೆಗೆ ಮುಕ್ತಾಯವಾಗಿದೆ. ಆದರೆ, ಹರಾಜು ಪ್ರಕ್ರಿಯೆಯಲ್ಲಿ ಭಾರತದ ಸುರೇಶ್ ರೈನಾ, ವೇಗಿ ಇಶಾಂತ್ ಶರ್ಮಾ, ಆಸ್ಟ್ರೇಲಿಯಾದ ಬ್ಯಾಟರ್ ಸ್ಟೀವ್ ಸ್ಮಿತ್, ಆ್ಯರನ್ ಫಿಂಚ್ ಬಿಕರಿಯಾಗದೆ ಉಳಿದಿದ್ದಾರೆ.

ಕಳೆದ ಆವೃತ್ತಿಗಳಲ್ಲಿ ಚೆನ್ನೈ ಪರ ಆಡಿದ್ದ ಸುರೇಶ್ ರೈನಾ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಈ ಬಾರಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗದೆ ಉಳಿದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಧೋನಿ ಮತ್ತು ರೈನಾ ನಡುವೆ ಉತ್ತಮ ಸ್ನೇಹ ಮತ್ತು ಒಡನಾಟವಿತ್ತು. ಮುಂಬರುವ ಟೂರ್ನಿಯಲ್ಲಿ ರೈನಾ ಆಡುವುದಿಲ್ಲ ಎಂಬುದನ್ನು ನಂಬುವುದಕ್ಕೆ ಕಷ್ಟವಾಗುತ್ತದೆ ಎಂದು ಕಾಂಬ್ಳಿ ಹೇಳಿದ್ದಾರೆ.

'ಮಿಸ್ಟರ್‌ ಐಪಿಎಲ್‌' ಎಂದೇ ಹೆಸರಾಗಿದ್ದ ರೈನಾ ಅವರಿಗೆ ಮೂಲ ಬೆಲೆ ₹2 ಕೋಟಿ ನಿಗದಿಯಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕು ಬಾರಿ ಚಾಂಪಿಯನ್ ಆಗುವಲ್ಲಿ ಸುರೇಶ್ ರೈನಾ ಪಾತ್ರ ಪ್ರಮುಖವಾಗಿತ್ತು. ಐಪಿಎಲ್‌ ಟೂರ್ನಿಯಲ್ಲಿ ಅವರು ಈವರೆಗೂ 5,528 ರನ್‌ ಗಳಿಸಿದ್ದಾರೆ.

ಭಾರತದ ಪರ 226 ಏಕದಿನ ಪಂದ್ಯಗಳನ್ನು ಆಡಿರುವ ರೈನಾ, 5,615 ರನ್ ಗಳಿಸಿದ್ದಾರೆ. 18 ಟೆಸ್ಟ್‌ ಪಂದ್ಯಗಳಲ್ಲಿ 768 ರನ್‌ ಹಾಗೂ 78 ಟಿ– 20 ಪಂದ್ಯಗಳಲ್ಲಿ 1,605 ರನ್‌ಗಳನ್ನು ಕಲೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.