ADVERTISEMENT

IPL 2022: ಜಹೀರ್, ಭುವಿ ಸಾಲಿಗೆ ಸೇರಿದ ಉಮೇಶ್ ಯಾದವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2022, 17:30 IST
Last Updated 1 ಏಪ್ರಿಲ್ 2022, 17:30 IST
ಉಮೇಶ್ ಯಾದವ್
ಉಮೇಶ್ ಯಾದವ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಉಮೇಶ್ ಯಾದವ್ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.

ಉಮೇಶ್ ಮಾರಕ ದಾಳಿಗೆ ನಲುಕಿದ ಪಂಜಾಬ್ ಕಿಂಗ್ಸ್, 18.2 ಓವರ್‌ಗಳಲ್ಲಿ 137 ರನ್ನಿಗೆ ತನ್ನೆಲ್ಲ ವಿಕೆಟ್‌‍ಗಳನ್ನು ಕಳೆದುಕೊಂಡಿತು.

ಐಪಿಎಲ್ ಇತಿಹಾಸದಲ್ಲಿ ಉಮೇಶ್, ಪವರ್ ಪ್ಲೇನಲ್ಲಿ 50 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಜಹೀರ್ ಖಾನ್ (52), ಸಂದೀಪ್ ಶರ್ಮಾ (52) ಹಾಗೂ ಭುವನೇಶ್ವರ್ ಕುಮಾರ್ (51) ಸಾರಿಗೆ ಸೇರ್ಪಡಗೊಂಡಿದ್ದಾರೆ.

ADVERTISEMENT

ಈ ಬಾರಿಯ ಐಪಿಎಲ್‌ನಲ್ಲಿ ಸತತ ಮೂರನೇ ಪಂದ್ಯದಲ್ಲೂ ಪವರ್ ಪ್ಲೇನಲ್ಲಿ ಉಮೇಶ್ ವಿಕೆಟ್ ಗಳಿಸಿದ್ದರು.

ಇನ್ನು ಐಪಿಎಲ್‌ನಲ್ಲಿ ಪಂಜಾಬ್ ತಂಡದ ವಿರುದ್ಧ ಉಮೇಶ್ ಒಟ್ಟು 33 ವಿಕೆಟ್ ಗಳಿಸಿದ್ದಾರೆ. ಇದು ಕೂಡ ದಾಖಲೆಯಾಗಿದ್ದು, ನಿರ್ದಿಷ್ಟ ತಂಡವೊಂದರ ವಿರುದ್ಧ ಬೌಲರ್‌‌ ಒಬ್ಬರ ಶ್ರೇಷ್ಠ ಸಾಧನೆಯಾಗಿದೆ.

ಪಂಜಾಬ್ ತಂಡದ ವಿರುದ್ಧವೇ ಸುನಿಲ್ ನಾರಾಯಣ್ 32 ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಸಿತ್ ಮಾಲಿಂಗ 31 ವಿಕೆಟ್ ಕಬಳಿಸಿದ್ದರು.

ಉಮೇಶ್ ಯಾದವ್ ತಮ್ಮ ನಾಲ್ಕು ಓವರ್‌ಗಳಲ್ಲಿ ಒಂದು ಮೇಡನ್ ಸಹಿತ ನಾಲ್ಕು ವಿಕೆಟ್ ಗಳಿಸಿದ್ದರು. ಈ ಮೂಲಕ ವಿಕೆಟ್ ಬೇಟೆಯಲ್ಲಿ (ಪರ್ಪಲ್ ಕ್ಯಾಪ್) ಅಗ್ರಸ್ಥಾನಕ್ಕೇರಿದ್ದಾರೆ. ಈವರೆಗೆ ಉಮೇಶ್ ಮೂರು ಪಂದ್ಯಗಳಲ್ಲಿ ಎಂಟು ವಿಕೆಟ್ ಕಬಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.