ADVERTISEMENT

IPL 2022: ಸಚಿನ್, ರೋಹಿತ್ ಸಾಧನೆ ಸರಿಗಟ್ಟಿದ ಕುಲದೀಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಏಪ್ರಿಲ್ 2022, 11:24 IST
Last Updated 29 ಏಪ್ರಿಲ್ 2022, 11:24 IST
ಕುಲದೀಪ್ ಯಾದವ್
ಕುಲದೀಪ್ ಯಾದವ್   

ಮುಂಬೈ: ಚೈನಾಮನ್ ಬೌಲರ್ ಕುಲದೀಪ್ ಯಾದವ್ ಕೈಚಳಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುರುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ಮೂರು ಓವರ್‌ಗಳಲ್ಲಿ 14 ರನ್ ತೆತ್ತು ನಾಲ್ಕು ವಿಕೆಟ್ ಕಬಳಿಸಿದ ಕುಲದೀಪ್, ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಸಲ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಭಾರತೀಯ ಆಟಗಾರರ ಸಾಲಿನಲ್ಲಿ, ಸಚಿನ್ ತೆಂಡೂಲ್ಕರ್ ಹಾಗೂ ರೋಹಿತ್ ಶರ್ಮಾ ಸಾಧನೆಯನ್ನು ಸರಿಗಟ್ಟಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಡೆಲ್ಲಿ ಗೆದ್ದ ಎಲ್ಲ ನಾಲ್ಕು ಪಂದ್ಯಗಳಲ್ಲಿ ಕುಲದೀಪ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2010ರಲ್ಲಿ ಸಚಿನ್ ಹಾಗೂ 2016ರಲ್ಲಿ ರೋಹಿತ್ ತಲಾ ನಾಲ್ಕು ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು. ಈ ಪಟ್ಟಿಯಲ್ಲಿ ಮುನ್ನಡೆಯಲ್ಲಿರುವ ವಿರಾಟ್ ಕೊಹ್ಲಿ, 2016ರಲ್ಲಿ ಐದು ಬಾರಿ ಪಂದ್ಯಶ್ರೇಷ್ಠ ಪುರಸ್ಕೃತರಾಗಿದ್ದರು.

ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತೀಯ ಆಟಗಾರರು:
ವಿರಾಟ್ ಕೊಹ್ಲಿ: 5 (2016)
ಕುಲದೀಪ್ ಯಾದವ್: 4 (2022)
ಋತುರಾಜ್ ಗಾಯಕವಾಡ್: 4 (2021)
ರೋಹಿತ್ ಶರ್ಮಾ: 4 (2016)
ಅಮಿತ್ ಮಿಶ್ರಾ: 4 (2013)
ಸಚಿನ್ ತೆಂಡೂಲ್ಕರ್: 4 (2010)
ಯೂಸುಫ್ ಪಠಾಣ್: 4 (2008)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.