ADVERTISEMENT

ಧೋನಿ ಪಾಲಿಗೆ ನಂ. 7 ಅದೃಷ್ಟ ಸಂಖ್ಯೆ ? ರಹಸ್ಯ ಬಿಚ್ಚಿಟ್ಟ ಮಹಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2022, 12:33 IST
Last Updated 17 ಮಾರ್ಚ್ 2022, 12:33 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ಚೆನ್ನೈ: ನಂಬರ್ 7 ಹಲವಾರು ಕ್ರೀಡಾಪಟುಗಳ ಪಾಲಿಗೆ ಅದೃಷ್ಟ ಸಂಖ್ಯೆಯೆನಿಸಿದೆ. ಪೋರ್ಚುಗಲ್‌ನ ಪುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ನಂ.7 ಸಂಖ್ಯೆಯನ್ನು ಹೊಂದಿದ್ದಾರೆ.

ಭಾರತದ ವಿಶ್ವಕಪ್ ವಿಜೇತ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ತಮ್ಮ ಜೆರ್ಸಿಯಲ್ಲಿ ಏಳು ಅಂಕಿಯನ್ನು ಹೊಂದಿದ್ದಾರೆ.

ಇದು ಧೋನಿ ಪಾಲಿಗೆ ಅದೃಷ್ಟದ ಸಂಖ್ಯೆಯೇ? ಈ ಕುರಿತು ಸ್ವತಃ ಮಹಿ ಉತ್ತರಿಸಿದ್ದಾರೆ.

ADVERTISEMENT

'ಆರಂಭದಲ್ಲಿ ಬಹಳಷ್ಟು ಜನರು ನಂ.7 ನನ್ನ ಪಾಲಿಗೆ ಅದೃಷ್ಟದ ಸಂಖ್ಯೆ ಎಂದು ಭಾವಿಸಿದ್ದರು. ಆದರೆ ಅತ್ಯಂತ ಸರಳವಾದ ಕಾರಣಕ್ಕಾಗಿ ನಾನಿದನ್ನು ಆರಿಸಿದ್ದೇನೆ. ನಾನು ಹುಟ್ಟಿದ ದಿನ ಜುಲೈ 7. ಆದ್ದರಿಂದ ವರ್ಷದ ಏಳನೇ ತಿಂಗಳ ಏಳನೇ ದಿನ ಆಗಿದ್ದರಿಂದ ಅದೇ ಅಂಕಿಯನ್ನು ಆಯ್ಕೆ ಮಾಡಿದ್ದೇನೆ' ಎಂದು ವಿವರಿಸಿದ್ದಾರೆ.

'ಉತ್ತಮವಾದ ಸಂಖ್ಯೆ ಯಾವುದು ಎಂದೆಲ್ಲ ಯೋಚಿಸುವ ಬದಲು ನನ್ನ ಜನ್ಮ ದಿನಾಂಕವನ್ನೇ ಬಳಕೆ ಮಾಡಲು ನಿರ್ಧರಿಸಿದ್ದೇನೆ' ಎಂದು ಹೇಳಿದ್ದಾರೆ.

'ನಂಬರ್ಆಯ್ಕೆ ಬಗ್ಗೆ ಮೂಢನಂಬಿಕೆಗೆ ಒಳಗಾಗಿಲ್ಲ, ನನ್ನ ಹೃದಯಕ್ಕೆ ಹತ್ತಿರವಾದ ಸಂಖ್ಯೆಯನ್ನು ಹಲವು ವರ್ಷಗಳಿಂದ ನನ್ನೊಂದಿಗೆ ಇಟ್ಟುಕೊಂಡಿದ್ದೇನೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.