ADVERTISEMENT

ಕಳಪೆ ಲಯದಲ್ಲಿರುವ ವಿರಾಟ್ ಕೊಹ್ಲಿಗೆ ಎಬಿ ಡಿವಿಲಿಯರ್ಸ್ ಅಮೂಲ್ಯ ಸಲಹೆ

ಏಜೆನ್ಸೀಸ್
Published 4 ಮೇ 2022, 11:08 IST
Last Updated 4 ಮೇ 2022, 11:08 IST
ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್ ಲಯದಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಅವರಿಗೆ ಎಬಿ ಡಿವಿಲಿಯರ್ಸ್ ಅಮೂಲ್ಯ ಸಲಹೆ ನೀಡಿದ್ದಾರೆ.

'ಎಎಫ್‌ಪಿ'ಗೆ ದೂರವಾಣಿ ಮೂಲಕ ನೀಡಿರುವ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಸತತ ವೈಫಲ್ಯದ ಬಗ್ಗೆ ವಿಲಿಯರ್ಸ್ ಅನುಕಂಪ ತೋರಿದ್ದಾರೆ. ಅಲ್ಲದೆ ವಿರಾಟ್ ಜೊತೆ ಸಂಪರ್ಕ ಸಾಧಿಸಿಲ್ಲ ಎಂದು ತಿಳಿಸಿದ್ದಾರೆ.

'ನೀವು ಆಡುವಾಗ ಸ್ಪಷ್ಟ ಮನಸ್ಸು ಹಾಗೂ ತಾಜಾ ಶಕ್ತಿಯ ಅಗತ್ಯವಿರುತ್ತದೆ. ಈ ಮೂಲಕ ಕಳಪೆ ಫಾರ್ಮ್‌ನಿಂದ ಹೊರಬರಲು ಪ್ರಯತ್ನಿಸಬೇಕು' ಎಂದಿದ್ದಾರೆ.

'ಇವೆಲ್ಲವೂ ಮನಸ್ಸಿಗೆ ಸಂಬಂಧಪಟ್ಟಿದ್ದಾಗಿದೆ. ಒಂದೆರಡು ಕೆಟ್ಟ ಪ್ರದರ್ಶನದಿಂದ ಲಯ ತಪ್ಪಬಹುದು. ಇದು ನಿರಂತರವಾಗಿ ಕಾಡುವ ಭೀತಿ ಇರುವುದರಿಂದ ಅದರಿಂದ ಹೊರಬರುವುದು ಕಷ್ಟವೆನಿಸುತ್ತದೆ. ನಾನಿದಕ್ಕೆ ಶೇಕಡಾವಾರು ಲೆಕ್ಕ ಹಾಕಲು ಸಾಧ್ಯವಿಲ್ಲ. ಆದರೆ ಮನಸ್ಸು ಹಾಗೂ ಮನಸ್ಸಿನ ಶಕ್ತಿಯ ನಡುವಣ ಯುದ್ಧವಾಗಿದೆ. ರಾತ್ರೋರಾತ್ರಿ ಕೆಟ್ಟ ಆಟಗಾರನಾಗಲುಸಾಧ್ಯವಿಲ್ಲ. ಈ ವಿಚಾರ ವಿರಾಟ್ ಅವರಿಗೂ ಗೊತ್ತು. ಆದರೆ ಈ ರೀತಿಯಾಗಿ ಯೋಚಿಸುವ ಮೂಲಕ ಮನಸ್ಸನ್ನು ಸಜ್ಜುಗೊಳಿಸಬೇಕಿದೆ' ಎಂದು ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಜೊತೆಯಾಗಿ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.