ADVERTISEMENT

ಹ್ಯಾಜಲ್‌ವುಡ್, ಸಿರಾಜ್ 6 ಓವರ್‌ಗಳಲ್ಲಿ ಬಿಟ್ಟುಕೊಟ್ಟಿದ್ದು ಭರ್ತಿ 100 ರನ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮೇ 2022, 12:37 IST
Last Updated 14 ಮೇ 2022, 12:37 IST
ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 54 ರನ್ ಅಂತರದ ಸೋಲಿಗೆ ಶರಣಾಗಿದೆ.

ಈ ನಡುವೆ ಆರ್‌ಸಿಬಿ ಬೌಲರ್‌ಗಳಾದ ಜೋಶ್ ಹ್ಯಾಜಲ್‌ವುಡ್ ಹಾಗೂ ಮೊಹಮ್ಮದ್ ಸಿರಾಜ್ ಸೇರಿ, ಆರು ಓವರ್‌ಗಳಲ್ಲಿ ಭರ್ತಿ 100 ರನ್ ಬಿಟ್ಟುಕೊಡುವ ಮೂಲಕ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಈ ಪೈಕಿ ಹ್ಯಾಜಲ್‌ವುಡ್ ನಾಲ್ಕು ಓವರ್‌ಗಳಲ್ಲಿ 64 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದ್ದರು. ಇದು ಐಪಿಎಲ್‌ನಲ್ಲಿ ಆರ್‌ಸಿಬಿ ಬೌಲರ್‌ನಅತ್ಯಂತ ಕಳಪೆ ಬೌಲಿಂಗ್ ದಾಖಲೆಯಾಗಿದೆ.

ಅತ್ತ ಎರಡು ಓವರ್‌ಗಳನ್ನಷ್ಟೇ ಎಸೆದಿದ್ದ ಸಿರಾಜ್, 36 ರನ್ ತೆತ್ತು ಹಿನ್ನಡೆ ಅನುಭವಿಸಿದರು.

ಪ್ರಸಕ್ತ ಸಾಲಿನ ಐಪಿಎಲ್‌‌ನಲ್ಲಿ ಆಸ್ಟ್ರೇಲಿಯಾ ಮೂಲದ ಹ್ಯಾಜಲ್‌ವುಡ್ ಒಂಬತ್ತು ಪಂದ್ಯಗಳಲ್ಲಿ 13 ವಿಕೆಟ್ ಗಳಿಸಿ ಪ್ರಭಾವಿ ಎನಿಸಿದ್ದರು. ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಲಯ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದರು.

ಅತ್ತ 13 ಪಂದ್ಯಗಳಲ್ಲಿ ಎಂಟು ವಿಕೆಟ್ ಮಾತ್ರ ಗಳಿಸಿರುವ ಸಿರಾಜ್, ಕಳಪೆ ಪ್ರದರ್ಶನ ಮಂದುವರಿದಿದೆ.

ಒಟ್ಟಾರೆಯಾಗಿ ಈ ಸೋಲಿನೊಂದಿಗೆ ಆರ್‌ಸಿಬಿ ತಂಡದ ಪ್ಲೇ-ಆಫ್ ಪ್ರವೇಶವು ಮತ್ತಷ್ಟು ಕಠಿಣವೆನಿಸಿದೆ. ಮೇ 19ರಂದು ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಸವಾಲನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.