ADVERTISEMENT

IPL 2023: ಡೆಲ್ಲಿ ತಂಡಕ್ಕೆ ಮೊದಲ ಜಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 22:45 IST
Last Updated 20 ಏಪ್ರಿಲ್ 2023, 22:45 IST
   

ನವದೆಹಲಿ: ಡೇವಿಡ್‌ ವಾರ್ನರ್ ಆಕರ್ಷಕ ಅರ್ಧಶತಕದ ನಡುವೆಯೂ ಆತಂಕದ ಕ್ಷಣಗಳನ್ನು ಎದುರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತು.

ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡವು 4 ವಿಕೆಟ್‌ಗಳಿಂದ ಕೋಲ್ಕತ್ತ ನೈಟ್‌ ರೈಡರ್ಸ್ ತಂಡವನ್ನು ಸೋಲಿಸಿತು.

ವಾರ್ನರ್‌ ಬ್ಯಾಟಿಂಗ್‌ (57, 41ಎ, 4X11) ಹಾಗೂ ಅಕ್ಷರ್ ಪಟೇಲ್ (ಅಜೇಯ 19 ರನ್‌, 13ಕ್ಕೆ 2 ವಿಕೆಟ್‌) ಅವರ ಆಲ್‌ರೌಂಡ್‌ ಆಟ ಡೆಲ್ಲಿ ಗೆಲುವಿಗೆ ಪ್ರಮುಖ ಕಾರಣವಾದವು.

ADVERTISEMENT

ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೋಲ್ಕತ್ತ ತಂಡವನ್ನು 20 ಓವರ್‌ಗಳಲ್ಲಿ 127 ರನ್‌ಗೆ ನಿಯಂತ್ರಿಸಿತು. ಡೆಲ್ಲಿ 19.2 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು. ಇದರೊಂದಿಗೆ ತಂಡದ ಸತತ ಐದು ಪಂದ್ಯಗಳ ಸೋಲಿನ ಸರಣಿ ಕಳಚಿತು.

ಜೇಸನ್‌, ರಸೆಲ್ ಆಟ: ಆರಂಭಿಕ ಬ್ಯಾಟರ್ ಜೇಸನ್ ರಾಯ್ (43; 39ಎ) ಮತ್ತು ಮಧ್ಯಮ ಕ್ರಮಾಂಕದಲ್ಲಿ ಆ್ಯಂಡ್ರೆ ರಸೆಲ್ (ಔಟಾಗದೆ 38; 31ಎ, 4X1, 6X4) ಅವರ ಆಟದಿಂದಾಗಿ ಕೋಲ್ಕತ್ತ ಅಲ್ಪಮೊತ್ತಕ್ಕೆ ಕುಸಿಯುವುದು ತಪ್ಪಿತು.

ವೇಗಿ ಇಶಾಂತ್ ಶರ್ಮಾ, ಎನ್ರಿಚ್ ನಾಕಿಯಾ, ಕುಲದೀಪ್ ಯಾದವ್ ಕೂಡ ತಲಾ ಎರಡು ವಿಕೆಟ್ ಗಳಿಸಿ, ಕೋಲ್ಕತ್ತಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು.

ಸಂಕ್ಷಿಪ್ತ ಸ್ಕೋರು: ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 127 (ಜೇಸನ್ ರಾಯ್ 43, ಮನದೀಪ್ ಸಿಂಗ್ 12, ಆ್ಯಂಡ್ರೆ ರಸೆಲ್ ಔಟಾಗದೆ 13, ಇಶಾಂತ್ ಶರ್ಮಾ 19ಕ್ಕೆ2, ಎನ್ರಿಚ್ ನಾಕಿಯಾ 15ಕ್ಕೆ2, ಅಕ್ಷರ್ ಪಟೇಲ್ 13ಕ್ಕೆ2, ಕುಲದೀಪ್ ಯಾದವ್ 15ಕ್ಕೆ2). ಡೆಲ್ಲಿ ಕ್ಯಾಪಿಟಲ್ಸ್: 19.2 ಓವರ್‌ಗಳಲ್ಲಿ 6 ವಿಕೆಟ್‌ಗೆ 128 (ಡೇವಿಡ್‌ ವಾರ್ನರ್ 57, ಪೃಥ್ವಿ ಶಾ 13, ಮನೀಷ್ ಪಾಂಡೆ 21, ಅಕ್ಷರ್ ಪಟೇಲ್‌ ಔಟಾಗದೆ 19; ವರುಣ್ ಚಕ್ರವರ್ತಿ 16ಕ್ಕೆ 2, ಅನುಕೂಲ್ ರಾಯ್‌ 19ಕ್ಕೆ 2, ನಿತೀಶ್ ರಾಣಾ 17ಕ್ಕೆ 2). ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್‌ಗೆ 4 ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.