ADVERTISEMENT

IPL 2023 GT v RR  | ಗಿಲ್ –ಮಿಲ್ಲರ್ ಅಬ್ಬರ, ರಾಯಲ್ಸ್ ಗೆಲುವಿಗೆ 178 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಏಪ್ರಿಲ್ 2023, 16:05 IST
Last Updated 16 ಏಪ್ರಿಲ್ 2023, 16:05 IST
ಡೇವಿಡ್ ಮಿಲ್ಲರ್ ಮತ್ತು ಶುಭಮನ್ ಗಿಲ್
ಡೇವಿಡ್ ಮಿಲ್ಲರ್ ಮತ್ತು ಶುಭಮನ್ ಗಿಲ್   

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) 23ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್‌ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಭಾನುವಾರ ಗೆಲುವಿಗಾಗಿ ಸೆಣಸಾಟ ನಡೆಸುತ್ತಿವೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ವಿರುದ್ಧ ಟಾಸ್‌ ಗೆದ್ದಿರುವ ರಾಜಸ್ಥಾನ, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 177 ರನ್ ಗಳಿಸಿದೆ.

ಡೇವಿಡ್ ಮಿಲ್ಲರ್ 46, ಶುಭಮನ್ ಗಿಲ್ 45, ಹಾರ್ದಿಕ್ ಪಾಂಡ್ಯ 28, ಅಭಿನವ್ ಮನೋಹರ್ 27, ಸಾಯಿ ಸುದರ್ಶನ್ 20 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ADVERTISEMENT

ರಾಜಸ್ಥಾನ ಪರ ಸಂದೀಪ್ ಶರ್ಮಾ 2, ಯಜುವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್ ಹಾಗೂ ಆಡ್ಯಮ್ ಜಂಪಾ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.