ADVERTISEMENT

ಇಂದು ಐಪಿಎಲ್‌–2024 ಹರಾಜು: ಇದೇ ಮೊದಲ ಬಾರಿಗೆ ಭಾರತದ ಹೊರಗೆ ಪ್ರಕ್ರಿಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2023, 3:10 IST
Last Updated 19 ಡಿಸೆಂಬರ್ 2023, 3:10 IST
ಐಪಿಎಲ್‌ ಹರಾಜು
ಐಪಿಎಲ್‌ ಹರಾಜು   

ದುಬೈ: 2024ರ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್)ನ ಹರಾಜು ಪ್ರಕ್ರಿಯೆ ಇಂದು ದುಬೈನಲ್ಲಿ ನಡೆಯಲಿದೆ. ಕೊಕ ಕೋಲಾ ಅರೆನಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, 214 ಭಾರತೀಯ ಆಟಗಾರರು ಸೇರಿದಂತೆ ಒಟ್ಟು 333 ಮಂದಿ ಆಟಗಾರರ ಹೆಸರು ಹರಾಜು ಪಟ್ಟಿಯಲ್ಲಿದೆ.

ಇದೇ ಮೊದಲ ಬಾರಿಗೆ ಹರಾಜು ‍‍ಪ್ರಕ್ರಿಯೆ ಭಾರತದಿಂದ ಹೊರಗೆ ನಡೆಯುತ್ತಿದೆ.

ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ. ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಚಾನಲ್‌ಗಳಲ್ಲಿ ಹರಾಜು ಪ್ರಕ್ರಿಯೆಯನ್ನು ಲೈವ್‌ ವೀಕ್ಷಿಸಬಹುದಾಗಿದೆ. ಜಿಯೋ ಸಿನಿಮಾ ಆ್ಯಪ್ ಮೂಲಕವೂ ವೀಕ್ಷಿಸಬಹುದು.

ADVERTISEMENT

ಈಗಾಗಲೇ ಫ್ರಾಂಚೈಸಿಗಳ ನಡುವೆ ಆಟಗಾರರ ಟ್ರೇಡಿಂಗ್‌ ನಡೆದಿದೆ. ಪ್ರಾಂಚೈಸಿಗಳು ಕೆಲವು ಆಟಗಾರರನ್ನು ಬಿಡುಗಡೆ ಮಾಡಿವೆ. ಈ ನಡುವೆ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ಮಾಡಿದ್ದು ಈ ಆವೃತ್ತಿಯ ದೊಡ್ಡ ಸುದ್ದಿ.

ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಬಾಕಿ ಇವೆ

  • ಚೆನ್ನೈ ಸೂಪರ್‌ ಕಿಂಗ್ಸ್ – ₹31.4 ಕೋಟಿ

  • ಡೆಲ್ಲಿ ಕ್ಯಾಪಿಟಲ್ಸ್– ₹28.95 ಕೋಟಿ

  • ಗುಜರಾತ್ ಟೈಟನ್ಸ್‌– ₹ 38.15 ಕೋಟಿ

  • ಕೋಲ್ಕತ್ತ ನೈಟ್ ರೈಡರ್ಸ್ – ₹ 32.70 ಕೋಟಿ

  • ಲಖನೌ ಸೂಪರ್‌ ಜೈಂಟ್ಸ್ – ₹13.15 ಕೋಟಿ

  • ಮುಂಬೈ ಇಂಡಿಯನ್ಸ್ – ₹17.75 ಕೋಟಿ

  • ಸನ್ ರೈಸರ್ಸ್ ಹೈದರಾಬಾದ್– ₹34 ಕೋಟಿ

  • ರಾಯಲ್ ಚಾಲೆಂಜರ್ಸ್ ಬೆಂಗಳೂರು – ₹23.25 ಕೋಟಿ

  • ಪಂಜಾಬ್ ಕಿಂಗ್ಸ್ – ₹ 29.10 ಕೋಟಿ

  • ರಾಜಸ್ಥಾನ್ ರಾಯಲ್ಸ್ – ₹14.50 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.